ಮೆಗಾಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ಇಂದು ತಮ್ಮ 37ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರಾಮ್ ಚರಣ್ ಹಾಗೂ ಜ್ಯೂ. ಎನ್ಟಿಆರ್ ಅಭಿನಯದ ‘RRR’ ಸಿನಿಮಾ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುವ ಮೂಲಕ ದಾಖಲೆ ಬರೆದಿದೆ.
ಈ ಸಂಭ್ರಮದ ಜೊತೆಗೆ ಇಂದು ‘RRR’ ಚಿತ್ರತಂಡ ರಾಮ್ ಚರಣ್ ಹುಟ್ಟುಹಬ್ಬವನ್ನು ಆಚರಿಸಲು ಸಜ್ಜಾಗಿದೆ ಈ ಚಿತ್ರದಲ್ಲಿ ಅಲ್ಲೂರಿ ಸೀತಾರಾಮ ರಾಮರಾಜು ಎಂಬ ಪಾತ್ರದಲ್ಲಿ ರಾಮ್ ಚರಣ್ ಅಭಿನಯಿಸಿದ್ದಾರೆ.
ಅಕ್ಕನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ಬಾಲಕನನ್ನು ಪೋಷಕರಿಗೆ ಹಸ್ತಾಂತರಿಸುವಂತೆ ಕೇರಳ ಹೈಕೋರ್ಟ್ ನಿರ್ದೇಶನ
2007ರಂದು ‘ಚಿರುತಾ’ ಚಿತ್ರದ ಮೂಲಕ ತಮ್ಮ ಸಿನಿಪಯಣ ಆರಂಭಿಸಿದರು. ನಂತರ 2009ರಲ್ಲಿ ತೆರೆಕಂಡ ‘ಮಗಧೀರ’ ಸಿನಿಮಾ ರಾಮ್ ಚರಣ್ ಗೆ ಭರ್ಜರಿ ಯಶಸ್ಸು ತಂದುಕೊಟ್ಟಿತು. ಎಸ್ ರಾಜಮೌಳಿ ನಿರ್ದೇಶನ ಎಂ.ಎಂ. ಕೀರವಾಣಿ ಸಂಗೀತಕ್ಕೆ ಸಿನಿಪ್ರೇಕ್ಷಕರು ಫಿದಾ ಆಗಿದ್ದರು. ನಂತರ ಸಾಕಷ್ಟು ಚಿತ್ರಗಳಲ್ಲಿ ಮಿಂಚಿದರು. ರಾಮ್ ಚರಣ್ ಹಾಗೂ ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ಆಚಾರ್ಯ’ ಸಿನಿಮಾ ಕೂಡ ಇನ್ನೇನು ಬಿಡುಗಡೆ ಸಿದ್ದವಾಗಿದೆ.