ಲಕ್ನೋ: ಲಕ್ನೋ ಜಿಲ್ಲಾ ಕಾರಾಗೃಹದ 36 ಹೊಸ ಕೈದಿಗಳಿಗೆ ಎಚ್ಐವಿ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಜೈಲು ಆಡಳಿತ ಮತ್ತು ಆರೋಗ್ಯ ಇಲಾಖೆಯಲ್ಲಿ ಕೋಲಾಹಲ ಉಂಟಾಗಿದೆ.
ಎಲ್ಲಾ ಸೋಂಕಿತರಿಗೆ ಔಷಧಿಗಳನ್ನು ನೀಡಲಾಗುತ್ತಿದೆ ಮತ್ತು ವೈದ್ಯರ ತಂಡವು ಅವರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುತ್ತಿದೆ. ಸೋಂಕು ಹರಡಲು ಕಾರಣಗಳನ್ನು ಕಂಡುಹಿಡಿಯುವ ಪ್ರಯತ್ನಗಳು ನಡೆಯುತ್ತಿವೆ ಎಂದರು.
ಉತ್ತರ ಪ್ರದೇಶ ಏಡ್ಸ್ ನಿಯಂತ್ರಣ ಸೊಸೈಟಿಯ ಸೂಚನೆಯ ಮೇರೆಗೆ, ಆರೋಗ್ಯ ಇಲಾಖೆ 2023 ರ ಡಿಸೆಂಬರ್ನಲ್ಲಿ ಜಿಲ್ಲಾ ಕಾರಾಗೃಹದಲ್ಲಿ ಎಚ್ಐವಿ ತಪಾಸಣೆ ನಡೆಸಿತ್ತು. ಈ ಪೈಕಿ 3 ಸಾವಿರಕ್ಕೂ ಹೆಚ್ಚು ಕೈದಿಗಳನ್ನು ಪರೀಕ್ಷಿಸಲಾಗಿದ್ದು, 36 ಹೊಸ ಕೈದಿಗಳಲ್ಲಿ ಎಚ್ಐವಿ ಸೋಂಕು ದೃಢಪಟ್ಟಿದೆ. ಜೈಲಿನಲ್ಲಿ ಈಗಾಗಲೇ 11 ರೋಗಿಗಳು ಸೋಂಕಿಗೆ ಒಳಗಾಗಿದ್ದರು. ಸದ್ಯ ಸೋಂಕಿತರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ. ಕೆಜಿಎಂಯುನ ಆಂಟಿ ರೆಟ್ರೋ ವೈರಲ್ ಥೆರಪಿ (ಎಆರ್ಟಿ) ಕೇಂದ್ರದಿಂದ ಸೋಂಕಿತರಿಗೆ ಔಷಧಿಯನ್ನು ನೀಡಲಾಗುತ್ತಿದೆ.