alex Certify 35 ವರ್ಷಗಳ ನಂತರ ಗರ್ಭ ಧರಿಸಿದ್ದೀರಾ……? ಹಾಗಾದ್ರೆ ನಿಮಗಿದು ತಿಳಿದಿರಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

35 ವರ್ಷಗಳ ನಂತರ ಗರ್ಭ ಧರಿಸಿದ್ದೀರಾ……? ಹಾಗಾದ್ರೆ ನಿಮಗಿದು ತಿಳಿದಿರಲಿ

35 ವರ್ಷಗಳ ನಂತರ ಗರ್ಭ ಧರಿಸೋ ಮಹಿಳೆಯರಿಗೆ ಕೆಲವೊಂದು ತೊಡಕುಗಳಿವೆ. 20ರ ಹರೆಯದಲ್ಲಿ ಮಹಿಳೆ ಹೆಚ್ಚು ಫಲವತ್ತಾಗಿರುತ್ತಾಳೆ, 35ರ ನಂತರ ಇದು ಕ್ಷೀಣಿಸಲಾರಂಭಿಸುತ್ತದೆ.

ಭಾರತೀಯ ಮಹಿಳೆಯರಲ್ಲಿ ಬಂಜೆತನದ ಸಮಸ್ಯೆ ಹೆಚ್ಚುತ್ತಿರುವುದರಿಂದ ಗರ್ಭಧಾರಣೆಯನ್ನು 25 ರಿಂದ 35 ವರ್ಷದ ನಡುವೆ ಯೋಜಿಸಬೇಕು. ಇದನ್ನು ಮತ್ತಷ್ಟು ವಿಳಂಬಗೊಳಿಸುವುದರಿಂದ ಕೆಲವು ಅಪಾಯಗಳು ಉಂಟಾಗಬಹುದು.

ನಿರ್ದಿಷ್ಟ ವಯಸ್ಸಿನ ನಂತರ ನೀವು ಬಂಜೆತನವನ್ನು ಅನುಭವಿಸುವ ಅಪಾಯವೂ ಇರುತ್ತದೆ. ಆದರೆ ನಿಮ್ಮ ವಿವಾಹವೇ ವಿಳಂಬವಾಗಿದ್ದರೆ 35ರ ಬಳಿಕ ಗರ್ಭಧರಿಸುವುದು ಅನಿವಾರ್ಯ. ಯಾವುದೇ ತೊಡಕುಗಳು ಎದುರಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಉತ್ತಮ. 35 ರ ನಂತರ ನೀವು ಮತ್ತು ನಿಮ್ಮ ಮಗು ಎದುರಿಸಬಹುದಾದ ಕೆಲವು ಸಾಮಾನ್ಯ ಸಮಸ್ಯೆಗಳನ್ನು ನೋಡೋಣ.

ಪ್ರಿಕ್ಲಾಂಪ್ಸಿಯಾ : ಇದು ಗರ್ಭಧಾರಣೆಯಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ. ಇದರಿಂದ ಅಧಿಕ ರಕ್ತದೊತ್ತಡ ಕಾಣಿಸಿಕೊಳ್ಳುತ್ತದೆ. ಯಕೃತ್ತು ಮತ್ತು ಮೂತ್ರಪಿಂಡಗಳಿಗೆ ಹಾನಿಯಾಗುತ್ತದೆ. ಗರ್ಭಾವಸ್ಥೆಯ 20ನೇ ವಾರದಲ್ಲಿ ಸಾಮಾನ್ಯವಾಗಿ ಸಂಭವಿಸುವ ಪ್ರಿಕ್ಲಾಂಪ್ಸಿಯಾ ತೀವ್ರ ತಲೆನೋವು, ವಾಕರಿಕೆ, ದೃಷ್ಟಿಯಲ್ಲಿ ಬದಲಾವಣೆ ಮತ್ತು ಉಸಿರಾಟದ ತೊಂದರೆ ಮುಂತಾದ ರೋಗಲಕ್ಷಣಗಳಿಗೆ ಕಾರಣವಾಗಬಹುದು. ಭ್ರೂಣದ ಬೆಳವಣಿಗೆ ಕುಂಠಿತವಾಗುವ ಸಾಧ್ಯತೆ ಇರುತ್ತದೆ.

ಅವಧಿಗೂ ಮುನ್ನ ಹೆರಿಗೆ : 35ರ ನಂತರ ಗರ್ಭಧರಿಸುವ ಮಹಿಳೆಯರಿಗೆ ಅವಧಿಗೂ ಮುನ್ನ ಹೆರಿಗೆಯಾಗುವ ಸಾಧ್ಯತೆ ಇರುತ್ತದೆ. ಗರ್ಭಧಾರಣೆಯ 38 ನೇ ವಾರದಲ್ಲಿ ಭ್ರೂಣದ ಪರೀಕ್ಷೆ ಮಾಡಿಸುವ ಮೂಲಕ ನೀವು ಈ ಅಪಾಯವನ್ನು ಕಡಿಮೆ ಮಾಡಬಹುದು.

ಆನುವಂಶಿಕ ಅಪಾಯಗಳು : ವಯಸ್ಸು ದಾಟಿದ ಮೇಲೆ ಗರ್ಭಧರಿಸುವುದರಿಂದ ಡೌನ್ ಸಿಂಡ್ರೋಮ್‌ಗೆ ಕಾರಣವಾಗುವ ಜನ್ಮಜಾತ ವೈಪರೀತ್ಯಗಳಿಗೆ ಮಗು ತುತ್ತಾಗಬಹುದು. ಒಂದು ವೇಳೆ ನೀವು 25 ನೇ ವಯಸ್ಸಿನಲ್ಲಿ ಗರ್ಭಿಣಿಯಾಗಿದ್ದರೆ, ಅಂತಹ ಮಗುವಿಗೆ ಜನ್ಮ ನೀಡುವ ಸಾಧ್ಯತೆ 1064 ರಲ್ಲಿ 1ರಷ್ಟಿರುತ್ತದೆ. 40 ನೇ ವಯಸ್ಸಿನಲ್ಲಿ ಈ ಅಪಾಯ ಹೆಚ್ಚು. 53 ಮಕ್ಕಳಲ್ಲಿ ಒಬ್ಬರಂತೆ ಈ ಖಾಯಿಲೆಗೆ ತುತ್ತಾಗುತ್ತಾರೆ. 45 ನೇ ವಯಸ್ಸು ಮೀರಿದ ಮೇಲೆ ತಾಯಿಯಾದಲ್ಲಿ ಈ ಅಪಾಯ ಇನ್ನಷ್ಟು ಹೆಚ್ಚಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...