ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಸಚಿವ ಏಕನಾಥ ಶಿಂಧೆಯವರ ಜೊತೆ ಗುರುತಿಸಿಕೊಂಡಿರುವ 34 ಮಂದಿ ಅತೃಪ್ತ ಶಾಸಕರು ಏಕನಾಥ ಶಿಂಧೆ ಶಿವಸೇನೆ ಶಾಸಕಾಂಗ ಪಕ್ಷದ ನಾಯಕ ಎಂಬ ನಿರ್ಣಯವನ್ನು ಕೈಗೊಂಡಿದ್ದಾರೆ.
ಅಲ್ಲದೇ ಈ ನಿರ್ಣಯದಲ್ಲಿ ಕಾಂಗ್ರೆಸ್ ಹಾಗೂ ಎನ್.ಸಿ.ಪಿ. ಪಕ್ಷಗಳು ಶಿವಸೇನೆ ಸಿದ್ದಾಂತಕ್ಕೆ ವಿರುದ್ದವಿರುವ ಕಾರಣ ಆ ಪಕ್ಷಗಳೊಂದಿಗೆ ಯಾವುದೇ ರೀತಿಯ ಸಂಬಂಧ ಇಟ್ಟುಕೊಳ್ಳದಿರಲು ತೀರ್ಮಾನಿಸಿದೆ.
ಇದರ ಮಧ್ಯೆ ಅತೃಪ್ತ ಶಾಸಕರುಗಳಿಗೆ ತಿರುಗೇಟು ನೀಡಲು ಮುಂದಾಗಿರುವ ಮುಖ್ಯಮಂತ್ರಿ ಉದ್ದವ್ ಠಾಕ್ರೆ, ಇಂದು ಸಂಜೆ 5 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಹಾಜರಾಗದವರ ವಿರುದ್ದ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.