ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಅವರ ಅತ್ಯುತ್ತಮ ಇನ್ನಿಂಗ್ಸ್ ನೋಡಿ ಎಲ್ಲರೂ ಬೆರಗಾಗಿದ್ದಾರೆ. ಕೊಹ್ಲಿ ಅಭಿಮಾನಿಗಳಂತೂ ಫುಲ್ ಖುಷಿಯಾಗಿದ್ದಾರೆ.
ವಿರಾಟ್ ಕೊಹ್ಲಿಗೆ ಈಗ 33 ವರ್ಷ. ಆದರೆ 20ರ ಹರೆಯದ ಕ್ರಿಕೆಟಿಗರನ್ನೂ ಮೀರಿಸಬಲ್ಲಂಥ ಫಿಟ್ನೆಸ್ ಹೊಂದಿದ್ದಾರೆ ವಿರಾಟ್. ವಿರಾಟ್ ಬ್ಯಾಟ್‌ನಿಂದ ಇಂತಹ ಶ್ರೇಷ್ಠ ಇನ್ನಿಂಗ್ಸ್ ಹೊರಹೊಮ್ಮಲು ಕಾರಣ ಅವರ ಫಿಟ್ನೆಸ್.
ಕೊಹ್ಲಿಯ ಫಿಟ್ನೆಸ್ ರಹಸ್ಯವೆಂದರೆ ಅವರ ಜೀವನಶೈಲಿ. ಕೊಹ್ಲಿ ತಮ್ಮ ಫಿಟ್ನೆಸ್ ಬಗ್ಗೆ ಸದಾ ಜಾಗೃತರಾಗಿರುತ್ತಾರೆ. ದಿನಚರಿಯಲ್ಲಿ ಕೆಲವು ವ್ಯಾಯಾಮಗಳನ್ನು ಅಳವಡಿಸಿಕೊಂಡಿದ್ದಾರೆ. ಅದನ್ನು ನಿಯಮಿತವಾಗಿ ಮಾಡುತ್ತಾರೆ.
ರನ್ನಿಂಗ್: ರನ್ನಿಂಗ್ ಮಾಡುವುದರಿಂದ ಕ್ಯಾಲೊರಿಗಳನ್ನು ವೇಗವಾಗಿ ಬರ್ನ್ ಮಾಡಬಹುದು. ಫಿಟ್ ಆಗಿರಲು ಓಡುವುದು ಅತ್ಯಗತ್ಯ. ವಿರಾಟ್ ಕೊಹ್ಲಿ ಅವರ ತೂಕ ನಿಯಂತ್ರಣದಲ್ಲಿದೆ, ಇದಕ್ಕೆ ರನ್ನಿಂಗ್ ಕೂಡ ಒಂದು ಕಾರಣ. ಓಟವು ಸ್ನಾಯುಗಳನ್ನು ಸಹ ಬಲಪಡಿಸುತ್ತದೆ. ಓಡುವುದರಿಂದ ತ್ರಾಣವೂ ಹೆಚ್ಚುತ್ತದೆ.
ಬಸ್ಕಿ: ವಿರಾಟ್ ಕೊಹ್ಲಿ ಫಿಟ್ ಆಗಿರೋ ಬಾಡಿ ಯಾವ ಸಿನೆಮಾ ಹೀರೋಗೂ ಕಡಿಮೆಯಿಲ್ಲ. ಅಷ್ಟು ಸುರಸುಂದರಾಂಗ ಟೀಂ ಇಂಡಿಯಾದ ಈ ಮಾಜಿ ನಾಯಕ. ವಿರಾಟ್ ಕೊಹ್ಲಿ ಸಿಕ್ಸ್ ಪ್ಯಾಕ್, ಆಬ್ಸ್ ಹೊಂದಿದ್ದಾರೆ. ಕೊಹ್ಲಿ ತಪ್ಪದೇ ಪ್ರತಿದಿನ ಸಿಟ್ ಅಪ್‌ಗಳನ್ನು ಮಾಡ್ತಾರೆ. ಸಿಟ್-ಅಪ್ ಮಾಡಲು ಜಿಮ್‌ಗೆ ಹೋಗುವ ಅಗತ್ಯವಿಲ್ಲ. ಅಂತಹ ಸುಲಭವಾದ ವ್ಯಾಯಾಮಗಳನ್ನು ನೀವು ಮನೆಯಲ್ಲಿಯೇ ಮಾಡಬಹುದು.
ವೇಯ್ಟ್ ಲಿಫ್ಟಿಂಗ್: ದೇಹವನ್ನು ಹುರಿಗೊಳಿಸಲು ಕಠಿಣ ಪರಿಶ್ರಮ ಬೇಕಾಗುತ್ತದೆ. ದೇಹವನ್ನು ಸದೃಢಗೊಳಿಸಲು ಮತ್ತು ತ್ರಾಣವನ್ನು ಹೆಚ್ಚಿಸಲು ವೇಟ್ ಲಿಫ್ಟಿಂಗ್ ಪ್ರಯೋಜನಕಾರಿಯಾಗಿದೆ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ತೂಕವನ್ನು ಎತ್ತಲು ಪ್ರಾರಂಭಿಸಿ. ಉತ್ತಮ ದೇಹವನ್ನು ಪಡೆಯಲು ವೇಟ್ ಲಿಫ್ಟಿಂಗ್ ಅತ್ಯಗತ್ಯ. ಕೊಹ್ಲಿ ಕೂಡ ವೇಯ್ಟ್ ಲಿಫ್ಟಿಂಗ್ ಅನ್ನು ತಪ್ಪದೇ ಮಾಡ್ತಾರೆ.
ಪುಷ್ ಅಪ್: ದೇಹಕ್ಕೆ ಬೆಸ್ಟ್ ಶೇಪ್ ಬೇಕಂದ್ರೆ ಪುಷ್ ಅಪ್ ಮಾಡಲೇಬೇಕು. ಒಂದೇ ಕೈಯಿಂದ ಪುಷ್ಅಪ್ ಮಾಡುವುದರಿಂದ ದೇಹವು ಫಿಟ್ ಆಗಿರುತ್ತದೆ. ಹೀಗೆ ಮಾಡುವುದರಿಂದ ಎದೆ ಮತ್ತು ಭುಜಗಳ ಆಕಾರ ಸುಧಾರಿಸುತ್ತದೆ. ಪುಷ್ಅಪ್ ಮಾಡುವುದರಿಂದ ದೇಹವೂ ಸದೃಢವಾಗುತ್ತದೆ. ಹಾಗಾಗಿ ಕೊಹ್ಲಿ ಕೂಡ ಪುಷ್‌ಅಪ್ ಅನ್ನು ತಮ್ಮ ನಿತ್ಯದ ವ್ಯಾಯಾಮದಲ್ಲಿ ಅಳವಡಿಸಿಕೊಂಡಿದ್ದಾರೆ.
ಈಜು : ಈಜು ಕೂಡ ಫಿಟ್ನೆಸ್‌ಗೆ ತುಂಬಾ ಪ್ರಯೋಜನಕಾರಿ. ಇದು ಕೊಬ್ಬನ್ನು ಕಡಿಮೆ ಮಾಡುತ್ತದೆ ಮತ್ತು ಸ್ನಾಯುಗಳನ್ನು ಬಲಪಡಿಸುತ್ತದೆ. ಸ್ವಿಮ್ಮಿಂಗ್ ಮೂಲಕ ಕ್ಯಾಲೋರಿಗಳನ್ನು ಸುಡಬಹುದು. ಫ್ರೀಸ್ಟೈಲ್ ಅಂತೂ ತುಂಬಾನೇ ಪ್ರಯೋಜನಕಾರಿ. ಹಾಗಾಗಿ ಸ್ವಿಮ್ಮಿಂಗ್ ಕೂಡ ಕೊಹ್ಲಿ ಫಿಟ್ನೆಸ್‌ನ ಸೀಕ್ರೆಟ್‌ಗಳಲ್ಲೊಂದು.