ಅಮೆರಿಕದ ಮಹಿಳೆಯೊಬ್ಬರು ತಮ್ಮ ಪಾದಗಳನ್ನು ಮುಂಭಾಗದಿಂದ ಹಿಂದಕ್ಕೆ ತಿರುಗಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಬರೆದಿದ್ದಾರೆ. ನ್ಯೂ ಮೆಕ್ಸಿಕೋದ ಅಲ್ಬುಕರ್ಕ್‌ನ ಕೆಲ್ಸಿ ಗ್ರಬ್ ತನ್ನ ಪಾದವನ್ನು 171.4 ಡಿಗ್ರಿ ತಿರುಗಿಸಬಲ್ಲೆ ಎಂಬುದಾಗಿ ಹೇಳಿಕೊಂಡಿದ್ದಾರೆ.
ಹೀಗೆ ಕೆಲ್ಸಿ ಗ್ರಬ್ ತನ್ನ ಪಾದವನ್ನು 171.4 ಡಿಗ್ರಿ ತಿರುಗಿಸಿ ಹಳೆಯ ದಾಖಲೆಯನ್ನು ಮುರಿದು, ಹೊಸ ವಿಶ್ವದಾಖಲೆಯನ್ನು ನಿರ್ಮಿಸಿದ್ದಾರೆ. ತನ್ನ ಪಾದವನ್ನು ಸಾಧ್ಯವಾದಷ್ಟು ತಿರುಗಿಸುವುದು ಎಷ್ಟು ಅಸಹಜವಾಗಿದೆ ಎಂದು ತನಗೆ ತಿಳಿದಿರಲಿಲ್ಲ ಎಂದು ಕೆಸ್ಲಿ ಹೇಳಿದರು.
‘ನಾನು ಲೈಬ್ರರಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಹೊಸ ವಿಶ್ವ ದಾಖಲೆಯ ಪುಸ್ತಕ ಬಂದಾಗ ನನ್ನ ಸಹೋದ್ಯೋಗಿಯೊಬ್ಬರು ಅದನ್ನು ನೋಡುತ್ತಿದ್ದರು. ನಾನು ಅದರಲ್ಲಿ ಮಹಿಳೆಯೊಬ್ಬರು ಕಾಲನ್ನು ತಿರುಗಿಸುವುದನ್ನು ನೋಡಿದೆ. ನಾನು ಸಹ ಅದನ್ನು ಮಾಡಬಲ್ಲೆ ಎಂದು ಅನಿಸಿತು. ಹೀಗಾಗಿ ಪಾದಗಳನ್ನು ತಿರುಗಿಸಿದೆ.’ ಎಂದು ಕೆಲ್ಸಿ ಹೇಳಿಕೊಂಡಿದ್ದಾರೆ.