ಬೆಂಗಳೂರು: ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 2016-17ರಲ್ಲಿ ರಚಿಸಲಾದ ಜಾತಿಗಳ ಸಾಮಾಜಿಕ-ಆರ್ಥಿಕ ಸಮೀಕ್ಷೆಯ ಬಗ್ಗೆ ಲಿಂಗಾಯತ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ನಟ ಚೇತನ್ ಅಹಿಂಸಾ ವಿರೋಧ ವ್ಯಕ್ತಪಡಿಸಿದ್ದು, 32 ಲಿಂಗಾಯತ ಶಾಸಕರು (3 ಹಾಲಿ ಸಚಿವರು — ಎಂ.ಬಿ. ಪಾಟೀಲ್, ಈಶ್ವರ್ ಖಂಡ್ರೆ, ಶಿವಾನಂದ ಪಾಟೀಲ್– ಮತ್ತು ಬಿಜೆಪಿಯ ವಿಜಯೇಂದ್ರ ಮತ್ತು ಬೊಮ್ಮಾಯಿ) ಜಾತಿ ಗಣತಿಯನ್ನು ವಿರೋಧಿಸಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ. ಈ ಎಲ್ಲಾ 32 ಲಿಂಗಾಯತ ಶಾಸಕರು ಶರಣರ ತತ್ವದ ಶತ್ರುಗಳು ಎಂದು ಕಿಡಿಕಾರಿದ್ದಾರೆ.
ಈ ಬ್ರಾಹ್ಮಣ್ಯದ ಕೊಂಡಿ ಮಂಚಣ್ಣನವರಿಗೆ ಬಸವಣ್ಣ ನಮ್ಮವರು ಎಂದು ಹೇಳಿಕೊಳ್ಳುವ ನೈತಿಕ ಹಕ್ಕಿಲ್ಲ ಎಂದು ಹೇಳಿದ್ದಾರೆ.
