ಪುಣೆ : ಮಹಾರಾಷ್ಟ್ರ ಪೊಲೀಸರು ಅತಿ ದೊಡ್ಡ ಡ್ರಗ್ಸ್ ಜಾಲವನ್ನು ಭೇದಿಸಿದ್ದು, 3,000 ಕೋಟಿ ರೂ.ಗಳ ಮೌಲ್ಯದ ಸುಮಾರು 1,700 ಕೆ.ಜಿ ಮುಫೆಡ್ರೋನ್ ವಶಪಡಿಸಿಕೊಂಡಿದ್ದಾರೆ.
ದೌಂಡ್ ತಾಲ್ಲೂಕಿನ ರಾಸಾಯನಿಕ ಉತ್ಪಾದನಾ ಕಾರ್ಖಾನೆ, ಪುಣೆಯ ವಿಶ್ರಂತ್ವಾಡಿಯ ಎರಡು ಗೋದಾಮುಗಳು ಮತ್ತು ನವದೆಹಲಿಯ ಸೌತ್ ಎಕ್ಸ್ಟೆನ್ಷನ್ನ ಕೆಲವು ಅಂಗಡಿಗಳ ಮೇಲೆ ನಡೆಸಿದ ಹಲವಾರು ದಾಳಿಗಳಲ್ಲಿ ಅಪರಾಧ ವಿಭಾಗವು 3,000 ಕೋಟಿ ರೂ.ಗಳ ಮೌಲ್ಯದ ಸುಮಾರು 1,700 ಕೆಜಿ ಮೆಫೆಡ್ರೋನ್ ಅನ್ನು ವಶಪಡಿಸಿಕೊಂಡಿದೆ.
ಮಂಗಳವಾರ ತಡರಾತ್ರಿಯವರೆಗೆ ಒಟ್ಟು 1,700 ಕೆಜಿ ವಶಪಡಿಸಿಕೊಳ್ಳಲಾಗಿದ್ದು, ಇದರ ಅಂದಾಜು ಮೌಲ್ಯ 3,000 ಕೋಟಿ ರೂ ಎಂದು ಪುಣೆ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಖಚಿತಪಡಿಸಿದ್ದಾರೆ.
ಮಂಗಳವಾರ ಇನ್ನೂ ಇಬ್ಬರನ್ನು ಬಂಧಿಸಲಾಗಿದ್ದು, ಈ ಪ್ರಕರಣದಲ್ಲಿ ಒಟ್ಟು ಬಂಧನಗಳ ಸಂಖ್ಯೆ ಐದಕ್ಕೆ ಏರಿದೆ, ಇನ್ನೂ ಹಲವಾರು ಶಂಕಿತರನ್ನು ಪ್ರಸ್ತುತ ಪ್ರಶ್ನಿಸಲಾಗುತ್ತಿದೆ. ಬಂಧಿತರಲ್ಲಿ ಕುರ್ಕುಂಭದಲ್ಲಿ ರಾಸಾಯನಿಕ ಕಾರ್ಖಾನೆ ನಡೆಸುತ್ತಿದ್ದ ವ್ಯಕ್ತಿಯೂ ಸೇರಿದ್ದಾನೆ.