ಸ್ಪೇಸ್ ಕ್ರಾಫ್ಟ್ ಪತನದಿಂದಾಗಿ ಉಂಟಾದ ಕುಳಿಯೇನೋ ಎಂಬಂತೆ ಕಾಣುವ ಸಿಂಕ್ಹೋಲ್ ಒಂದು ಮೆಕ್ಸಿಕೋದ ಕೃಷಿಭೂಮಿ ಒಂದರಲ್ಲಿ ಕಾಣಿಸಿದೆ. ಈ ಸಿಂಕ್ಹೋಲ್ ಸುತ್ತಮುತ್ತಲಿನ ಮನೆಗಳನ್ನ ನಾಶ ಮಾಡಿದೆ. ತತ್ ತಕ್ಷಣದಲ್ಲಿ 60 ಮೀಟರ್ ವ್ಯಾಸದಷ್ಟು ಆವರಿಸಿದ ಈ ಸಿಂಕ್ಹೋಲ್ ಇನ್ನೂ ದೊಡ್ಡದಾಗುತ್ತಲೇ ಇದೆ.
ಕಳೆದ ವಾರ ಮೊದಲ ಬಾರಿಗೆ ಈ ಸಿಂಕ್ಹೋಲ್ ಕಾಣಿಸಿಕೊಂಡಾಗ ಮೆಕ್ಸಿಕೋ ಸರ್ಕಾರಿ ಅಧಿಕಾರಿಗಳು ಈ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ಈ ಸಿಂಕ್ಹೋಲ್ನ ತುಂಬೆಲ್ಲ ನೀರು ತುಂಬಿಕೊಂಡಿದೆ. ಈ ಸಿಂಕ್ಹೋಲ್ ಸರಿಸುಮಾರು 60 ಅಡಿ ಆಳ ಹೊಂದಿದೆ ಎಂದು ಅಂದಾಜಿಸಲಾಗಿದೆ. ಈ ಸಿಂಕ್ಹೋಲ್ನ ಸಮೀಪ ಸುಳಿಯದಂತೆ ಸ್ಥಳೀಯರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಕಳೆದ ಶನಿವಾರ ಮೊದಲ ಬಾರಿಗೆ ಕಾಣಿಸಿಕೊಂಡ ಈ ಸಿಂಕ್ ಹೋಲ್ ಇದೀಗ ಸುಮಾರು 70 ಸಾವಿರ ಚದರ ಅಡಿ ವ್ಯಾಪ್ತಿಯ ಕೃಷಿ ಭೂಮಿಯನ್ನ ನುಂಗಿ ಹಾಕಿದೆ. ಈ ಘಟನೆಯಿಂದಾಗಿ ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳೀಯರನ್ನ ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.