
ಗದಗ: ಸರ್ಕಾರಿ ಬಸ್ ಹರಿದು 30 ಕುರಿಗಳು ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ದಿಂಡೂರು ಸಮೀಪ ನಡೆದಿದೆ.
ಓವರ್ ಟೇಕ್ ಮಾಡಲು ಹೋಗಿ ಸರ್ಕಾರಿ ಬಸ್ ಕುರಿ ಮುಂದೆ ಮೇಲೆ ಹರಿದಿದೆ. ಸರ್ಕಾರಿ ಬಸ್ ಚಾಲಕನ ನಿರ್ಲಕ್ಷ್ಯವೇ ಘಟನೆಗೆ ಕಾರಣವೆನ್ನಲಾಗಿದೆ. ಚಾಲಕನ ನಿರ್ಲಕ್ಷ್ಯದಿಂದ 30 ಕುರಿಗಳು ಬಲಿಯಾಗಿವೆ. ಬಾಗಲಕೋಟೆ ಜಿಲ್ಲೆ ಬಾದಾಮಿ ಡಿಪೋಗೆ ಸೇರಿದ ಸರ್ಕಾರಿ ಬಸ್ ಹರಿದು ದುರ್ಘಟನೆ ಸಂಭವಿಸಿದೆ. 4.5 ಲಕ್ಷ ರೂಪಾಯಿ ಮೌಲ್ಯದ ಕುರಿಗಳನ್ನು ಕಳೆದುಕೊಂಡ ಕುರಿಗಾಹಿ ಕಣ್ಣೀರಿಟ್ಟಿದ್ದಾರೆ.