ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರಕಟಿಸಲಾಗಿದೆ. ಜೀವಮಾನ ಸಾಧನೆ ವಿಶೇಷ ಪ್ರಶಸ್ತಿಯನ್ನು ಮಂಗಳೂರು ವಾರ್ತಾ ಭಾರತೀಯ ಅಬ್ಬು ಸಲಾಂ ಪುತ್ತಿಗೆ ಅವರಿಗೆ ನೀಡಲಾಗಿದೆ.
ಶಿವಮೊಗ್ಗದ ಪತ್ರಕರ್ತ ಹಾಗೂ ಲೇಖಕ ಆರುಂಡಿ ಶ್ರೀನಿವಾಸ ಮೂರ್ತಿ, ಪ್ರೊ. ಎ.ಎಸ್. ಬಾಲಸುಬ್ರಮಣ್ಯಂ, ರಿಷಿಕೇಶ್ ಬಹದ್ದೂರ್ ದೇಸಾಯಿ, ಸುಭಾಷ್ ಹೂಗಾರ್, ಟಿ. ಗುರುರಾಜ್, ಕುಮಾರನಾಥ ಯು.ಕೆ., ಸಿದ್ದು ಕಾಲೋಜಿ, ನಿರೂಪಮಾ ಸೇರಿದಂತೆ 30 ಮಂದಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ನೀಡಲಾಗಿದೆ.
ಅಭಿಮಾನಿ ದತ್ತಿ ಪ್ರಶಸ್ತಿಗೆ ಕೆ. ಓಂಕಾರ ಮೂರ್ತಿ, ಮೈಸೂರು ದಿಗಂತ ದತ್ತಿ ಪ್ರಶಸ್ತಿಗೆ ಬಿ.ಕೆ. ದೇವಯ್ಯ, ನಂದೀಶ್ ಮಲ್ಲೇನಹಳ್ಳಿ, ಅಭಿಮನ್ಯು ಪ್ರಶಸ್ತಿಗೆ ಪ್ರಭು ಬ. ಅಡವಿಹಾಳ, ಪ್ರಜಾ ಸಂದೇಶ ದತ್ತಿ ಪ್ರಶಸ್ತಿಗೆ ಮೊಹಮ್ಮದ್ ಅಖಿಲ್ ಉಡೆವು ಅವರನ್ನು ಆಯ್ಕೆ ಮಾಡಲಾಗಿದೆ.
ರಹಮತ್ ತರಿಕೆರೆ ಅವರಿಗೆ ಡಾ. ಬಿ.ಆರ್. ಅಂಬೇಡ್ಕರ್ ಮೂಕ ನಾಯಕ ಪ್ರಶಸ್ತಿ, ಮ್ಯುರಿಯಲ್ ನಿರ್ಮಲ ಡಿಸಿಲ್ವ ಅವರಿಗೆ ಮಾಧ್ಯಮ ಮಹಾ ಸಾಧಕ ಸಿ.ವಿ. ರಾಜಗೋಪಾಲ್ ದತ್ತಿ ಪ್ರಶಸ್ತಿ, ಹೆಚ್.ಎಸ್. ಸುಧೀಂದ್ರ ಕುಮಾರ್ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದತ್ತಿ ಪ್ರಶಸ್ತಿ, ಹೊಸಪೇಟೆ ಟೈಮ್ಸ್ ಪತ್ರಿಕೆಗೆ ಆಂದೋಲನ ಪ್ರಶಸ್ತಿ ನೀಡಲಾಗಿದೆ.