ಕೋಝಿಕ್ಕೋಡ್: ಈಗ ಎಲ್ಲೆಲ್ಲೂ ಫಿಫಾ ವರ್ಲ್ಡ್ ಕಪ್ ಜ್ವರ. ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಪುಲ್ಲಾವೂರ್ ಗ್ರಾಮದಲ್ಲಿ, ಅರ್ಜೆಂಟೀನಾದ ಫುಟ್ಬಾಲ್ ನಾಯಕ ಲಿಯೋನೆಲ್ ಮೆಸ್ಸಿ ಅಭಿಮಾನಿಗಳು ಕುರುಂಗಟ್ಟು ಕಡವು ನದಿಯ ಮಧ್ಯೆ 30 ಅಡಿ ಎತ್ತರದ ಬೃಹತ್ ಕಟೌಟ್ ಸ್ಥಾಪಿಸಿದ್ದಾರೆ.
ಅರ್ಜೆಂಟೀನಾ ಅಭಿಮಾನಿಗಳ ಸಂಘವು ಕುರುಂಗಟ್ಟು ಕಡವು ನದಿಯ ಮಧ್ಯದಲ್ಲಿ ಈ ಕಟ್‌ಔಟ್ ನಿರ್ಮಿಸಿದೆ. ಅಭಿಮಾನಿಗಳು ತಮ್ಮ ಟ್ವಿಟರ್ ಖಾತೆಯಲ್ಲಿ ಇದನ್ನು ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೆ ಅಪಾರ ಅಭಿಮಾನಿಗಳು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
ಈ ಕಟ್ಔಟ್ನಲ್ಲಿ ಮೆಸ್ಸಿ ಬಿಳಿ ಮತ್ತು ಆಕಾಶ ನೀಲಿ ಬಣ್ಣದ ಡ್ರೆಸ್ ಧರಿಸಿದ್ದಾರೆ. ಅವರ ಶರ್ಟ್ ಮತ್ತು ಶಾರ್ಟ್ಸ್‌ನಲ್ಲಿ 10 ನೇ ಸಂಖ್ಯೆಯ ಸ್ಟ್ಯಾಂಪ್ ಮಾಡಲಾಗಿದೆ. ಅಭಿಮಾನಿಗಳು ಅರ್ಜೆಂಟೀನಾ ಧ್ವಜ ಮತ್ತು ನೀಲಿ ಬ್ಯಾನರ್ ಹಾಕಿದ್ದು ಅದರ ಮೇಲೆ ‘ಅರ್ಜೆಂಟೀನಾ ಫ್ಯಾನ್ಸ್ ಪುಲ್ಲವೂರ್’ ಎಂದು ಬರೆದಿದ್ದಾರೆ.
ಅರ್ಜೆಂಟೀನಾ ಮತ್ತು ಬ್ರೆಝಿಲ್ ತಂಡಗಳಿಗೆ ಕೇರಳದಲ್ಲಿ ಅತಿಹೆಚ್ಚು ಅಭಿಮಾನಿಗಳಿದ್ದಾರೆ. ಉಳಿದ ಸಮಯದಲ್ಲಿ ಮೆಸ್ಸಿ-ರೊನಾಲ್ಡೊ-ನೇಮರ್ ಅಭಿಮಾನಿಗಳಾಗಿರುವವರು ಫುಟ್ಬಾಲ್ ವಿಶ್ವಕಪ್ ಸಂದರ್ಭದಲ್ಲಿ ಅರ್ಜೆಂಟೀನಾ- ಬ್ರೆಝಿಲ್ ತಂಡಗಳ ಬೆಂಬಲಕ್ಕೆ ನಿಲ್ಲುತ್ತಾರೆ. ಪ್ರತಿ ವಿಶ್ವಕಪ್ ನ ದಿನಗಳಲ್ಲಿ ಕಾಣುವ ರೀತಿಯಲ್ಲೇ ಈ ಬಾರಿಯೂ ಅಭಿಮಾನಿಗಳ ಉತ್ಸಾಹಕ್ಕೆ ಯಾವುದೇ ಕೊರತೆಯಿಲ್ಲ.
https://twitter.com/Shrxydinho/status/1587085811983749120?ref_src=twsrc%5Etfw%7Ctwcamp%5Etweetembed%7Ctwterm%5E1587085811983749120%7Ctwgr%5Ea5eb4e6d72282e12f5609d046c2f1145ba1b45e8%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2F30-feet-tall-lionel-messi-cut-out-erected-in-kerala-village-as-fifa-world-cup-fever-takes-over-6306859.html