alex Certify 30-40 ವರ್ಷ ವಯಸ್ಸಿನ ಮಹಿಳೆಯರು ಮಾಡಿಸಿಕೊಳ್ಳಲೇಬೇಕು ಈ ಪರೀಕ್ಷೆ, ಕಾರಣ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

30-40 ವರ್ಷ ವಯಸ್ಸಿನ ಮಹಿಳೆಯರು ಮಾಡಿಸಿಕೊಳ್ಳಲೇಬೇಕು ಈ ಪರೀಕ್ಷೆ, ಕಾರಣ ಗೊತ್ತಾ….?

ಇಡೀ ಕುಟುಂಬದ ಜವಾಬ್ಧಾರಿ ನಿಭಾಯಿಸುವ ಮಹಿಳೆಯರು ಸ್ವಯಂ ಕಾಳಜಿ ವಹಿಸುವುದೇ ಇಲ್ಲ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಹಿಸುವುದಿಲ್ಲ. 30 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಕಡ್ಡಾಯವಾಗಿ ಕೆಲವೊಂದು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು.

ಸ್ತನ ಪರೀಕ್ಷೆ :  ಋತುಚಕ್ರದ ನಂತರ ಪ್ರತಿ 3-4 ತಿಂಗಳಿಗೊಮ್ಮೆ ಸ್ವಯಂ ಸ್ತನ ಪರೀಕ್ಷೆಯನ್ನು ಮಾಡಿಕೊಳ್ಳಬೇಕು. 20-35ನೇ ವಯಸ್ಸಿನಲ್ಲಿ ಪ್ರತಿ 3 ವರ್ಷಗಳಿಗೊಮ್ಮೆ ಸ್ತ್ರೀರೋಗ ತಜ್ಞರಿಂದ ಸ್ತನ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. 35ರ ನಂತರ ವರ್ಷಕ್ಕೊಮ್ಮೆ ಈ ಪರೀಕ್ಷೆ ಕಡ್ಡಾಯ.

ಸ್ತನ ಕ್ಯಾನ್ಸರ್‌ ಪರೀಕ್ಷೆ :  40ನೇ ವಯಸ್ಸಿನ ಬಳಿಕ ಸ್ತನ ಕ್ಯಾನ್ಸರ್ ಅನ್ನು ಪರೀಕ್ಷೆಯನ್ನು ಮಹಿಳೆಯರು ಪ್ರತಿ ವರ್ಷ ಅಥವಾ ಎರಡು ವರ್ಷಗಳಿಗೊಮ್ಮೆ ಮಾಡಿಸಿಕೊಳ್ಳಬೇಕು. ಕುಟುಂಬದಲ್ಲಿ ಯಾರಿಗಾದರೂ ಕ್ಯಾನ್ಸರ್‌ ಇದ್ದರೆ ಅಂಥವರು ಈ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯ.

ಮೂಳೆ ಸಾಂದ್ರತೆ :  ಅಷ್ಟೇ ಅಲ್ಲ 30 ರಿಂದ 40 ವರ್ಷ ವಯಸ್ಸಿನ ಮಹಿಳೆಯರು ಮೂಳೆ ಸಾಂದ್ರತೆಯ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಉತ್ತಮ. ಇದರಿಂದ ಆಸ್ಟಿಯೊಪೊರೋಸಿಸ್ ಅಪಾಯ ಕಡಿಮೆಯಾಗುತ್ತದೆ.

ಬಿಪಿ ಮತ್ತು ಕೊಲೆಸ್ಟ್ರಾಲ್ ಪರೀಕ್ಷೆ: ಹೃದಯವು ಆರೋಗ್ಯಕರವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಕಾಲಕಾಲಕ್ಕೆ ಬಿಪಿ ಮತ್ತು ಕೊಲೆಸ್ಟ್ರಾಲ್ ಪರೀಕ್ಷೆಯನ್ನು ಮಾಡಬೇಕು. ಏಕೆಂದರೆ ವಯಸ್ಸಾದಂತೆ ಹೃದ್ರೋಗದ ಅಪಾಯ ಹೆಚ್ಚಾಗುತ್ತದೆ.

ಮಧುಮೇಹ ಪರೀಕ್ಷೆ: ಮಧುಮೇಹ ಪರೀಕ್ಷೆಯು ಬಹಳ ಮುಖ್ಯ. ಏಕೆಂದರೆ ಬೊಜ್ಜು ಮತ್ತು ಮಧುಮೇಹದ ಅಪಾಯವು ವಯಸ್ಸು ಹೆಚ್ಚಾದಂತೆ ಜಾಸ್ತಿಯಾಗುತ್ತದೆ.

ಕರುಳಿನ ಕ್ಯಾನ್ಸರ್ ಪರೀಕ್ಷೆ: 45 ವರ್ಷ ವಯಸ್ಸಿನ ನಂತರ, ಕೊಲೊರೆಕ್ಟಲ್ ಕ್ಯಾನ್ಸರ್ ಅನ್ನು ತಪ್ಪಿಸಲು ಮಹಿಳೆಯರು ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಬೇಕು. ಇದು ಸಿಗ್ಮೋಯ್ಡೋಸ್ಕೋಪಿ ಅಥವಾ ಕೊಲೊನೋಸ್ಕೋಪಿಯನ್ನು ಒಳಗೊಂಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...