ಸಿಹಿ ತಿಂಡಿ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ಹಬ್ಬಗಳು ಬಂದ್ರೆ ಸಿಹಿ ಸೇವನೆ ಹೆಚ್ಚಾಗುತ್ತದೆ. ಕೊನೆಯಲ್ಲಿ ಐಸ್ ಕ್ರೀಂ, ಚಾಕೋಲೇಟ್ ತಿಂದು ಜನರು ತೃಪ್ತಿಪಟ್ಟುಕೊಳ್ತಾರೆ. ಆದ್ರೆ ಈ ಸಿಹಿ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಒಂದೇ ಒಂದು ತಿಂಗಳು ಸಂಪೂರ್ಣ ಸಿಹಿ ತ್ಯಜಿಸಿದ್ರೆ ಆರೋಗ್ಯ ವೃದ್ಧಿಯಾಗೋದ್ರಲ್ಲಿ ಎರಡು ಮಾತಿಲ್ಲ.
ಸಿಹಿ ಸೇವನೆ ಬಿಟ್ರೆ ತೂಕ ಕಡಿಮೆಯಾಗುತ್ತದೆ. ಜೊತೆಗೆ ಹೃದಯ ಆರೋಗ್ಯವಾಗಿ ಕೆಲಸ ಮಾಡುತ್ತದೆ.
ಸಿಹಿ ಸೇವನೆಯಿಂದ ದೂರವಿದ್ರೆ ಮಧುಮೇಹ ದೂರವಾಗುತ್ತದೆ. ಸಿಹಿ ತಿನ್ನುವ ಆಸೆಯಾದ್ರೆ ಒಣ ಹಣ್ಣುಗಳನ್ನು ಸೇವನೆ ಮಾಡಿ.
ಗಂಟು ನೋವಿಗೂ ಮೂಲ ಸಕ್ಕರೆ. ಗಂಟು ನೋವು ನಿವಾರಣೆಯಾಗಬೇಕೆನ್ನುವವರು ಸಕ್ಕರೆಯನ್ನು ತ್ಯಜಿಸಬೇಕು.
ಸಿಹಿ ಸೇವನೆ ಬಿಟ್ರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಮೆದುಳು ಸಕ್ರಿಯವಾಗುತ್ತದೆ. ಸ್ಮರಣ ಶಕ್ತಿ ಹೆಚ್ಚಾಗುತ್ತದೆ.
ಸಿಹಿ ತ್ಯಜಿಸಿದ್ರೆ ಜೀರ್ಣಶಕ್ತಿ ಹೆಚ್ಚಾಗುತ್ತದೆ. ಹೊಟ್ಟೆ, ಕರುಳು ಆರೋಗ್ಯವಾಗಿರುತ್ತದೆ. ಹಲ್ಲುಗಳು ಹಾಗೂ ಒಸಡು ಕೂಡ ಆರೋಗ್ಯವಾಗಿರುತ್ತವೆ.
ಸಿಹಿ ನಿದ್ರಾಹೀನತೆಗೆ ಕಾರಣವಾಗುತ್ತದೆ. ರಾತ್ರಿ ಸಿಹಿ ತಿಂದ್ರೆ ಈ ಸಮಸ್ಯೆ ಹೆಚ್ಚು. ಹಾಗಾಗಿ ಸಿಹಿಯಿಂದ ದೂರವಿರುವುದು ಒಳ್ಳೆಯದು.