alex Certify -30 ಡಿಗ್ರಿ ತಾಪಮಾನದಲ್ಲಿ 65 ಪುಶ್ ಅಪ್ಸ್ ಹೊಡೆದ ಐಟಿಬಿಪಿ ಯೋಧ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

-30 ಡಿಗ್ರಿ ತಾಪಮಾನದಲ್ಲಿ 65 ಪುಶ್ ಅಪ್ಸ್ ಹೊಡೆದ ಐಟಿಬಿಪಿ ಯೋಧ…..!

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರು (ಐಟಿಬಿಪಿ) ತಮ್ಮ ಕೇಂದ್ರ ಪರ್ವತಾರೋಹಣ ತಂಡದೊಂದಿಗೆ ಹಿಮಾಲಯ ಪರ್ವತವಾದ ಮೌಂಟ್ ಕಾರ್ಜೋಕ್ ಕಂಗ್ರಿಯನ್ನು ಏರಿದೆ. ಕಮಾಂಡೆಂಟ್ ರತನ್ ಸಿಂಗ್ ಸೋನಾಲ್ ನೇತೃತ್ವದ ಪಡೆಯ ಆರು ಉನ್ನತ ಪರ್ವತಾರೋಹಿಗಳ ತಂಡವು ಫೆಬ್ರವರಿ 20 ರಂದು 20,177 ಅಡಿ ಎತ್ತರದ ಶಿಖರವನ್ನು ಏರಿದೆ ಎಂದು ಐಟಿಬಿಪಿ ತಿಳಿಸಿದೆ.

ಐಟಿಬಿಪಿ ಬಾರ್ಡರ್ ಪೊಲೀಸ್ ತಂಡವು ಮೌಂಟ್ ಕಾರ್ಜೋಕ್ ಕಾಂಗ್ರಿಯನ್ನು ಮೊದಲ ಬಾರಿ ಆರೋಹಣ ಮಾಡಿದ್ದಾರೆ. ಏಸ್ ಪರ್ವತಾರೋಹಿ ಕಮಾಂಡೆಂಟ್ ರತನ್ ಸಿಂಗ್ ಸೋನಾಲ್ ನೇತೃತ್ವದ ಐಟಿಬಿಪಿಯ 6 ಉನ್ನತ ದರ್ಜೆಯ ಪರ್ವತಾರೋಹಿಗಳ ತಂಡವು ಲಡಾಖ್‍ನ ಹಿಮಪರ್ವತವಾದ 20,177 ಅಡಿ ಎತ್ತರದ ಶಿಖರವನ್ನು ಏರಿತು ಎಂದು ಐಟಿಬಿಪಿ ತಿಳಿಸಿದೆ.

ತೀವ್ರವಾದ ಚಳಿಗಾಲದಲ್ಲಿ ದೈಹಿಕ ಮತ್ತು ಮಾನಸಿಕ ಗಟ್ಟಿತನವನ್ನು ತಡೆದುಕೊಂಡು ತಂಡವು ಯಾವುದೇ ವಿಶೇಷ ಪರ್ವತಾರೋಹಣ ಉಪಕರಣಗಳು ಮತ್ತು ಬೆಂಬಲ ವ್ಯವಸ್ಥೆಯನ್ನು ಬಳಸಿಕೊಳ್ಳದೆ ಆರೋಹಣವನ್ನು ಪೂರ್ಣಗೊಳಿಸಿದೆ.‌

ಮೌಂಟ್ ಕಾರ್ಜೋಕ್ ಕಂಗ್ರಿಯನ್ನು ಏರುತ್ತಿರುವ ಕೆಲ ದೃಶ್ಯಗಳನ್ನು ಐಟಿಬಿಪಿ ತಂಡವು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಜೊತೆಗೆ ಮೈನಸ್ 30 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ 17,500 ಅಡಿ ಎತ್ತರದಲ್ಲಿ ಒಂದೇ ಬಾರಿಗೆ 65 ಪುಷ್-ಅಪ್‍ಗಳನ್ನು ಪೂರ್ಣಗೊಳಿಸಿದ ಕಮಾಂಡೆಂಟ್ ಸೋನಾಲ್ ಅವರ ವಿಡಿಯೋ ಕೂಡ ಶೇರ್ ಮಾಡಿದೆ. ಅಂತಹ ಮೈ ನಡುಗಿಸುವ ಚಳಿಯಲ್ಲೂ ಸೋನಾಲ್ ಅವರ ಸಾಹಸ ನೋಡಿದ ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ.

65 ಪುಷ್-ಅಪ್‍ಗಳನ್ನು ಹೊಡೆದ ಸೋನಾಲ್ 55 ವರ್ಷ ವಯಸ್ಸಿನ ಕಮಾಂಡೆಂಟ್ ಆಗಿದ್ದು, ಅವರ ಈ ವ್ಯಾಯಾಮವನ್ನು ನೋಡಿದ ನೆಟ್ಟಿಗರೊಬ್ಬರು ನಮ್ಮ ಸೇನಾ ಸಿಬ್ಬಂದಿ ಎಷ್ಟು ಪ್ರಬಲರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸೋನಾಲ್ ಅವರ ಈ ವಿಡಿಯೋವು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ವಿಡಿಯೋ 13,000 ಕ್ಕೂ ಹೆಚ್ಚು ಲೈಕ್‍ಗಳನ್ನು ಪಡೆದುಕೊಂಡಿದ್ದು, 1,800 ಕ್ಕೂ ಹೆಚ್ಚು ಜನರು ಶೇರ್ ಮಾಡಿಕೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...