ಬೆಂಗಳೂರು: ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳ ಬೇಜವಾಬ್ದಾರಿಗೆ ಮೂರು ವರ್ಷದ ಮಗುವೊಂದು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಅನಾರೋಗ್ಯದಿಂದ ತೀವ್ರ ಸುಸ್ತಾಗಿದ್ದ ಮೂರು ವರ್ಷದ ಮಗು ಯಾದ್ವಿ ಎಂಬುವವಳನ್ನು ಪೋಷಕರು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಿದ್ದರು. ಅಕ್ಟೋಬರ್ 29ರಂದು ಮಗುವನ್ನು ದಾಖಲಿಸಲಾಗಿತ್ತು. ಮಗು ತೀವ್ರ ಸುಸ್ತಿನಿಂದ ಬಳಲುತ್ತಿದೆ ಎಂದು ವೈದ್ಯರು ಇಂಜಕ್ಷನ್ ಹಾಗೂ ಡ್ರಿಪ್ ಹಾಕಿದ್ದಾರೆ.
ಡ್ರಿಪ್ ಹಾಕುತ್ತಿದ್ದಂತೆ ಮಗುವಿನ ತುಟಿ ಊದಿ ರಕ್ತ ಬರಲಾರಂಭಿಸಿದೆ. ಚುಚ್ಚು ಮದ್ದು, ಡ್ರಿಪ್ ಪರಿಶೀಲಿಸಿದಾಗ ಪೋಷಕರಿಗೆ ಅದು ಅವಧಿ ಮೀರಿರುವುದು ಗೊತ್ತಾಗಿದೆ. ವೈದ್ಯರನ್ನು ಕರೆದು ಹೇಳಿದರೆ ವೈದ್ಯರು ಈ ಬಗ್ಗೆ ಸಮಜಾಯಿಷಿ ನೀಡಿದ್ದಾರೆ. ಮಗುವಿನ ಸ್ಥಿತಿ ಗಂಭೀರವಾಗಿದೆ. ತಕ್ಷಣ ಮಗುವನ್ನು ಬೇರೆ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.
ಸಂಜೀವಿನಿ ಆಸ್ಪತ್ರೆ ವಿರುದ್ಧ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.