
ಕೊಲ್ಕತ್ತಾ: ಮಕ್ಕಳು ಆಟವಾಡುತ್ತಿದ್ದಾರೆ ಎಂದು ಪೋಷಕರು ಗಮನಹರಿಸದಿದ್ದರೆ ಮಕ್ಕಳು ಎಂತಹ ದುರಂತಗಳನ್ನು ಮಾಡಿಕೊಳ್ಳುತ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಮೂರು ವರ್ಷದ ಬಾಲಕನೊಬ್ಬ ಬಲೂನ್ ನುಂಗಿ ಮೃತಪಟ್ಟಿರುವ ದಾರುಣ ಘಟನೆ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ನಡೆದಿದೆ.
ಮನೆಯ ಹೊರಗಡೆ ಸ್ನೇಹಿತರ ಜೊತೆ ಆಟವಾಡುತ್ತಿದ್ದ ಮಗು ಇದ್ದಕ್ಕಿದ್ದಂತೆ ಅಸ್ವಸ್ಥವಾಗಿದೆ. ಪೋಷಕರು ಇತರ ಮಕ್ಕಳನ್ನು ವಿಚಾರಿಸಿದಾಗ ಮಗು ಬಲೂನ್ ನುಂಗಿದೆ ಎಂದು ತಿಳಿಸಿದ್ದಾರೆ.
ತಕ್ಷಣ ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಮಗುವಿನ ಗಂಟಲಲ್ಲಿ ಸಿಲುಕಿದ್ದ ವಸ್ತುವನ್ನು ಯಶಸ್ವಿಯಾಗಿ ಹೊರತೆಗೆದ್ದಾರೆ. ಆದರೆ ಗಂಟಲಲ್ಲಿ ಗಾಳಿಯ ಮಾರ್ಗ ಸಂಪೂರ್ಣವಾಗಿ ಮುಚ್ಚಿದ್ದ ಪರಿಣಾಮ ಮೂರು ವರ್ಷದ ಬಾಲಕ ಮೃತಪಟ್ಟಿದ್ದಾನೆ.