ರಾಜಸ್ತಾನದ ಕೊಟ್‌ಪುಟ್ಲಿಯಲ್ಲಿ ಬೋರ್‌ವೆಲ್ ನಲ್ಲಿ ಸಿಲುಕಿದ್ದ 3 ವರ್ಷದ ಚೇತನಾಳನ್ನು ಒಂಬತ್ತು ದಿನಗಳ ನಂತರ ಬುಧವಾರ ರಕ್ಷಿಸಲಾಗಿದೆ.
ಡಿಸೆಂಬರ್ 23 ರಂದು ಬಾಲಕಿ ಬೋರ್‌ವೆಲ್‌ಗೆ ಬಿದ್ದಿದ್ದರಿಂದ ರಕ್ಷಣಾ ಕಾರ್ಯಾಚರಣೆಯು ಇಂದು ಹತ್ತನೇ ದಿನಕ್ಕೆ ಕಾಲಿಟ್ಟಿದೆ. ಚೇತನಾ ಡಿಸೆಂಬರ್ 23 ರಿಂದ 150 ಅಡಿ ಆಳದ ಬೋರ್‌ವೆಲ್‌ನಲ್ಲಿ ಸಿಲುಕಿಕೊಂಡಿದ್ದಳು. NDRF ಮತ್ತು SDRF ರ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಸಮಾನಾಂತರ ಸುರಂಗ ಕೊರೆಯಲು ತಂಡಗಳು ಹಗಲಿರುಳು ಶ್ರಮಿಸುತ್ತಿದ್ದವು.
ಬಹುಶಃ ರಾಜ್ಯದಲ್ಲಿಯೇ ಸುದೀರ್ಘವಾದ ರಕ್ಷಣಾ ಕಾರ್ಯಾಚರಣೆಗಳಲ್ಲಿ ಒಂದಾಗಿದ್ದು, ಇದು 160 ಗಂಟೆಗಳ ಕಾಲ ನಡೆಯಿತು, ಇದಕ್ಕಾಗಿ ಕುಟುಂಬ ಸದಸ್ಯರು ಆಡಳಿತವನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಮತ್ತೊಂದೆಡೆ ಆಡಳಿತವು ಇದು ಕಠಿಣ ಕಾರ್ಯಾಚರಣೆಗಳಲ್ಲಿ ಒಂದಾಗಿದೆ ಎಂದು ಹೇಳಿಕೊಂಡಿತ್ತು. ಕೊನೆಗೂ ಎಲ್ಲರ ಪ್ರಯತ್ನ, ಪ್ರಾರ್ಥನೆ ಫಲಿಸಿದ್ದು, ಬಾಲಕಿಯನ್ನು ಬೋರ್ ವೆಲ್ ನಿಂದ ರಕ್ಷಿಸಲಾಗಿದೆ.
VIDEO | Three-year-old girl, who fell in a borewell in Rajasthan’s Kotputli on December 23 last year, rescued by officials.
(Full video available on PTI Videos – https://t.co/n147TvrpG7) pic.twitter.com/48Pxw0Eg4a
— Press Trust of India (@PTI_News) January 1, 2025