ಸರಿಯಾಗಿ 5 ಸೆಂಮೀ ಉದ್ದವಿದ್ದ ಗಣೇಶನ ವಿಗ್ರಹವೊಂದನ್ನು ಅಕಸ್ಮಾತ್ ಆಗಿ ನುಂಗಿದ್ದ ಮೂರು ವರ್ಷದ ಬಾಲಕನೊಬ್ಬ ಪವಾಡ ಸದೃಶವಾಗಿ ಪಾರಾದ ಘಟನೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಜರುಗಿದೆ.
ಆಟವಾಡುವ ವೇಳೆ ಮೂರ್ತಿಯನ್ನು ನುಂಗಿದ ಬಾಲಕನ ಎದೆಯಲ್ಲಿ ನೋವು ಕಾಣಿಸಿಕೊಂಡ ಕೂಡಲೇ ಆತನನ್ನು ಹಳೇ ವಿಮಾನ ನಿಲ್ದಾಣದ ರಸ್ತೆಯಲ್ಲಿರುವ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೂಡಲೇ ಮಾಡಲಾದ ಎಕ್ಸ್- ರೇ ಪರೀಕ್ಷೆಯಲ್ಲಿ ಬಾಲಕನ ದೇಹದಲ್ಲಿ ಬಾಹ್ಯ ವಸ್ತುವೊಂದು ಸೇರಿಕೊಂಡಿರುವುದು ಪತ್ತೆಯಾಗಿದೆ.
ಪುಟ್ಟ ಬಾಲಕನ ಹಾಡಿಗೆ ಸೆಲೆಬ್ರಿಟಿಗಳೂ ಫಿದಾ
ಕೂಡಲೇ ಬಾಲಕನಿಗೆ ಅನಸ್ತೇಷಿಯಾ ಕೊಟ್ಟು, ಎಂಡೋಸ್ಕೋಪಿ ಮೂಲಕ ಮೂರ್ತಿಯನ್ನು ಸುರಕ್ಷಿತವಾಗಿ ಹೊರಗೆ ತೆಗೆಯಲಾಗಿದೆ. ಮುಂದಿನ ಮೂರು ಗಂಟೆಗಳಲ್ಲಿ ಸಂಪೂರ್ಣವಾಗಿ ಚೇತರಿಸಿಕೊಂಡ ಬಾಲಕನನ್ನು ಅದೇ ದಿನ ಸಂಜೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.