
ಪ್ರಾಥಮಿಕ ವರದಿಗಳ ಪ್ರಕಾರ, ಮಗುವಿಗೆ ಯಾವುದೇ ವೈದ್ಯಕೀಯ ಅಥವಾ ಆನುವಂಶಿಕ ಆರೋಗ್ಯ ಸಮಸ್ಯೆಗಳಿರಲಿಲ್ಲ. ಈ ಸಂದರ್ಭದಲ್ಲಿ ಕೊರೋನಾ ರೋಗದಿಂದ ಸಾವನ್ನಪ್ಪಿದ ಎರಡನೇ ಮಗು ಇದು ಎಂದು ಕತಾರ್ ಸಾರ್ವಜನಿಕ ಆರೋಗ್ಯ ಸಚಿವಾಲಯ ತಿಳಿಸಿದೆ.
ಕೋವಿಡ್ ಸಾಮಾನ್ಯವಾಗಿ ಮಕ್ಕಳಲ್ಲಿ ಸೌಮ್ಯವಾಗಿರುವುದರಿಂದ ಶಿಶುಮರಣ ಅಪರೂಪವಾಗಿದೆ. ಆದರೆ ಕತಾರ್ ನ ಪ್ರಸ್ತುತ ಕೋವಿಡ್ ಅಲೆಯ ಸಮಯದಲ್ಲಿ, ಹೆಚ್ಚಿನ ಸಂಖ್ಯೆಯ ಮಕ್ಕಳು ಸೋಂಕಿಗೆ ಒಳಗಾಗುತ್ತಿದ್ದು, ಅವರಿಗೆ ವೈದ್ಯಕೀಯ ಆರೈಕೆಯ ಅಗತ್ಯವಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಒಮಿಕ್ರಾನ್, ಹಿಂದಿನ ರೂಪಾಂತರಗಳಿಗಿಂತ ಸೌಮ್ಯವಾಗಿದ್ದರೂ ವೇಗವಾಗಿ ಹರಡುತ್ತಿರುವುದರಿಂದ, ಸುಲಭವಾಗಿ ಮತ್ತು ಕಡಿಮೆ ಸಮಯದಲ್ಲಿ ಹೆಚ್ಚು ಜನಸಂಖ್ಯೆಗೆ ಹರಡುತ್ತಿದೆ ಎಂದು ತಜ್ಞರು ಹೇಳಿದ್ದಾರೆ.
ಈ ಘಟನೆಯಿಂದ ಜನರಲ್ಲಿ ಮಕ್ಕಳಿಗೂ ಕೋವಿಡ್ ಬರಬಹುದೇ ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇದಕ್ಕೆ ಹೌದು ಎಂದಿರುವ ತಜ್ಞರು, ಮಕ್ಕಳು ಮತ್ತು ಅಂಬೆಗಾಲಿಡುವವರು ಸಹ ಸೋಂಕಿಗೆ ಒಳಗಾಗಬಹುದು. ಇದಕ್ಕೆ ಪರಿಹಾರ ಪ್ರಾರಂಭಿಕ ಹಂತದಲ್ಲೇ ಸೋಂಕನ್ನ ಗುರುತಿಸಿ ಅದಕ್ಕೆ ಚಿಕಿತ್ಸೆ ನೀಡುವುದು ಎಂದಿದ್ದಾರೆ.
ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿರುವ ರೋಗಲಕ್ಷಣಗಳು
ನಿರಂತರ ಕೆಮ್ಮು
ಜ್ವರ ಅಥವಾ ಶೀತ
ಉಸಿರಾಟದಲ್ಲಿ ತೊಂದರೆ
ಸ್ನಾಯು ಒಡೆತ
ದೇಹ ಬಾಧೆ
ತಲೆನೋವು
ವಿಪರೀತ ಆಯಾಸ
ವಾಕರಿಕೆ ಅಥವಾ ವಾಂತಿ
ಕಟ್ಟಿದ ಮೂಗು
ಸೋರುವ ಮೂಗು
ಕೊರೋನಾ ರೋಗಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಆದರೆ ಜ್ವರ ಮತ್ತು ಕೆಮ್ಮು ಸೋಂಕಿಗೆ ಒಳಗಾಗುವ ವಯಸ್ಕರು ಮತ್ತು ಮಕ್ಕಳಲ್ಲಿ ಕಂಡುಬರುವ ಎರಡು ಸಾಮಾನ್ಯ ಲಕ್ಷಣಗಳಾಗಿವೆ.
ತಜ್ಞರ ಪ್ರಕಾರ, ವಯಸ್ಕರಲ್ಲಿ ಉಸಿರಾಟದ ತೊಂದರೆ ಹೆಚ್ಚಾಗಿ ಕಂಡುಬರುತ್ತದೆ. ಮಕ್ಕಳಿಗೂ ನ್ಯುಮೋನಿಯಾ ಆಗಬಹುದು. ಗಂಟಲು ನೋವು, ಅತಿಯಾದ ಆಯಾಸ ಮತ್ತು ಅತಿಸಾರ ಮಕ್ಕಳಲ್ಲಿ ಕಂಡುಬರುತ್ತದೆ. ಕೊರೋನಾ ಸೋಂಕಿಗೆ ತುತ್ತಾದ ಮಕ್ಕಳಿಗೆ ಗಂಭೀರವಾದ ಅನಾರೋಗ್ಯ ಉಂಟಾಗುವ ಸಾಧ್ಯತೆ ಇದ್ದು ಪೋಷಕರು ಜಾಗರೂಕರಾಗಿರಿ ಎಂದು ತಜ್ಞರು ಸಲಹೆ ನೀಡಿದ್ದಾರೆ.