ಮಂಗಳೂರು: ಬೀಚ್ ನೋಡಲೆಂದು ಬಂದಿದ್ದ ಮೂವರು ಪ್ರವಾಸಿಗರು ಸಮುದ್ರ ಪಾಲಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕುಳಾಯಿ ಬಳಿಯ ಹೊಸಬೆಟ್ಟು ಬಳಿ ನಡೆದಿದೆ.
ಚಿತ್ರದುರ್ಗದ ಮಂಜುನಾಥ್, ಶಿವಮೊಗ್ಗದ ಶಿವಕುಮಾರ್, ಬೆಂಗಳೂರಿನ ಸತ್ಯವೇಲು ಮೃತ ದುರ್ದೈವಿಗಳು.
ಪ್ರವಾಸಕ್ಕೆಂದು ಬಂದಿದ್ದ ನಾಲ್ವರು ಬೀಚ್ ನೋಡಲೆಂದು ಹೋಗಿದ್ದರು. ಈ ವೇಳೆ ಸಮುದ್ರದಲ್ಲಿ ಈಜಲು ಹೋಗಿದ್ದಾರೆ. ಅಲೆಗಳ ಹೊಡೆತಕ್ಕ ಸಿಲುಕಿದ್ದ ನಾಲ್ವರಲ್ಲಿ ಬೀದರ್ ಮೂಲದ ಪರಮೇಶ್ವರ್ ಎಂಬಾತನನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ. ಮೂವರು ನೀರುಪಾಲಾಗಿದ್ದಾರೆ.
ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.