ತಮಿಳುನಾಡಿನ ಚೆಂಗಲ್ಪಟ್ಟುವಿನಲ್ಲಿ ರೈಲ್ವೇ ಹಳಿ ಮೇಲೆ ಸೆಲ್ಫಿ ವಿಡಿಯೋ ತೆಗೆಯಿತ್ತಿದ್ದ ಮೂವರು ಯುವಕರು ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.
ಸಿಂಗಪೆರುಮಾಳ್ ದೇವಸ್ಥಾನದ ಬಳಿಯ ಚೆಟ್ಟಿಪುನ್ನಿಯಂ ಪ್ರದೇಶದ ನಿವಾಸಿಗಳಾದ ಪ್ರಕಾಶ್ (17), ಮೋಹನ್ (17) ಮತ್ತು ಅಶೋಕ್ ಕುಮಾರ್ (24) ರೈಲ್ವೆ ಹಳಿಗಳ ಮೇಲೆ ತೆಗೆದ ವಿಡಿಯೊಗಳನ್ನು ನಿಯಮಿತವಾಗಿ ಪೋಸ್ಟ್ ಮಾಡುತ್ತಿದ್ದರು.
ದುರಂತ ಸಂಭವಿಸಿದಾಗ ಅದೇ ರೀತಿ ಮಾಡಲು ಪ್ಲಾನ್ ಮಾಡಿದ್ದರು. ಚೆನ್ನೈ ತಾಂಬರಂನಿಂದ ವಿಲ್ಲುಪುರಂಗೆ ತೆರಳುತ್ತಿದ್ದ ಎಕ್ಸ್ಪ್ರೆಸ್ ರೈಲಿಗೆ ಸಿಲುಕಿ ಇವರುಗಳು ಸಾವನ್ನಪ್ಪಿದ್ದು, ರೈಲ್ವೆ ಹಳಿ ಮೇಲೆ ನಿಂತು ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು.
ತಪ್ಪಾದ ವಿಮಾನ ಹತ್ತಿ 800 ಮೈಲಿ ಪ್ರಯಾಣಿಸಿದ ದಂಪತಿ…!
ಘಟನೆಯ ಬಗ್ಗೆ ಮಾಹಿತಿ ಪಡೆದ ರೈಲ್ವೇ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮೂವರ ಮೃತದೇಹಗಳನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗಾಗಿ ಚೆಂಗಲ್ಪಟ್ಟು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ.