ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ಬಾಕಿ ತುಟ್ಟಿಭತ್ಯೆ ಜುಲೈನಿಂದ ಬಿಡುಗಡೆ ಮಾಡಲಾಗುವುದು ಎಂದು ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ ಸಚಿವರು, ಕೊರೋನಾ ಬಿಕ್ಕಟ್ಟಿನ ಕಾರಣದಿಂದ ತಡೆಹಿಡಿಯಲಾಗಿದ್ದ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ 3 ಕಂತಿನ ತುಟ್ಟಿಭತ್ಯೆ, ತುಟ್ಟಿಭತ್ಯೆ ಪರಿಹಾರ ಮೊತ್ತವನ್ನು ಜುಲೈನಿಂದ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
2020 ರ ಜನವರಿ 1, 2020 ರ ಜುಲೈ 7 ಮತ್ತು 2021 ರ ಜನವರಿ 1 ರಿಂದ 3 ಕಂತಿನಲ್ಲಿ ಬಿಡುಗಡೆ ಮಾಡಬೇಕಿದ್ದ ತುಟ್ಟಿಭತ್ಯೆ(ಡಿಎ) ಮತ್ತು ತುಟ್ಟಿಭತ್ಯೆ ಪರಿಹಾರ ಮೊತ್ತ(ಡಿಆರ್) ಬಾಕಿ ಕಂತಿನ ಮೊತ್ತವನ್ನು ಜುಲೈನಿಂದ ಬಿಡುಗಡೆ ಮಾಡುವುದಾಗಿ ಸಚಿವರು ಹೇಳಿದ್ದಾರೆ.