ತುಮಕೂರು: ಮೂರು ತಿಂಗಳ ಮಗುವನ್ನು ಹೆತ್ತ ತಾಯಿ ಬಿಟ್ಟು ಹೋಗಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆ ಬಳಿಯ ಹೆಡಗರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಮೂರು ತಿಂಗಳ ಹೆಣ್ಣು ಮಗುವನ್ನು ನಿಷ್ಕರುಣಿ ತಾಯಿಯೊಬ್ಬರು ಬಿಟ್ಟು ಹೋಗಿದ್ದಾರೆ. ಆಶಾ ಕಾರ್ಯಕರ್ತೆ ಕಲಾವತಿ ಎಂಬುವವರು ವಾಕಿಂಗ್ ಮಾಡುವಾಗ ಮಗು ಅಳುತ್ತಿರುವ ಶಬ್ದ ಕೇಳಿ ಸ್ಥಳಕ್ಕಾಗಮಿಸಿದ್ದಾರೆ. ಈ ವೇಳೆ ಹೆಣ್ಣು ಮಗು ಪತ್ತೆಯಾಗಿದೆ.
ತಕ್ಷಣ ಮಗುವನ್ನು ರಕ್ಷಿಸಿ ನೊಣವಿನಕೆರೆ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಮಗುವನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗು ಆರೋಗ್ಯದಿಂದ ಇದ್ದು, ಮಗು ನಾಲ್ಕುವರೆ ಕೆಜಿ ತೂಕವಿದೆ. ಸದ್ಯ ಮಗುವಿನ ಪೋಷಕರ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.