ಬೆಂಗಳೂರು : ವನ್ಯಜೀವಿ ವಸ್ತುಗಳನ್ನು ಸರ್ಕಾರಕ್ಕೆ ಮರಳಿಸಲು 3 ತಿಂಗಳು ಕಾಲಾವಕಾಶ ನೀಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಇಂದು ವಿಕಾಸಸೌಧದಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಸಚಿವ ಈಶ್ವರ್ ಖಂಡ್ರೆ ಮಾತನಾಡಿದರು.
ವನ್ಯಜೀವಿ ವಸ್ತು ವಾಪಸ್ ಕೊಡಲು ಕೊನೇ ಅವಕಾಶ ಕೊಡಲು ತೀರ್ಮಾನ ಮಾಡಲಾಗಿದೆ. ಪ್ರಾಣಿ ಅಂಗಾಂಗ ಹಿಂತಿರುಗಿಸಲು 3 ತಿಂಗಳು ಸಮಯ ಕೊಡಲು ತೀರ್ಮಾನ ಆಗಿದೆ. ಕಾನೂನು ಇಲಾಖೆ ಕೂಡಾ ಇದಕ್ಕೆ ಒಪ್ಪಿಗೆ ನೀಡಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ಯಾವುದೇ ಅಂಗಾಂಗ ಇದ್ದರೂ ಜನರು ವಾಪಸ್ ಕೊಡಬೇಕು. 1978 ಹಿಂದಿನಿಂದ ಪ್ರಾಣಿ ಅಂಗಾಂಗ ಇರೋರಿಗೆ ಈ ಅವಕಾಶ ಕೊಡಲಾಗಿದೆ. ಅಂಗಾಗ ವಾಪಸ್ ಮಾಡಿದರೆ ಕೇಸ್ ಹಾಕಲ್ಲ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದರು.