ರಾಜ್ಯ ರಾಜಧಾನಿ ಬೆಂಗಳೂರಿನಲ್ಲೊಂದು ಅಮಾನವೀಯ ಘಟನೆ ನಡೆದಿದೆ. ತನ್ನಲ್ಲಿ ಕೆಲಸ ಮಾಡುತ್ತಿದ್ದ ಒಡಿಶಾ ಮೂಲದ ಕಾರ್ಮಿಕರಿಗೆ ಕಂಪನಿ ಮಾಲೀಕ ಹಣ ನೀಡದ ಹಿನ್ನೆಲೆಯಲ್ಲಿ ಸಾವಿರ ಕಿಲೋಮೀಟರ್ ದೂರದ ತಮ್ಮೂರಿಗೆ ಅವರುಗಳು ನಡೆದುಕೊಂಡೇ ಹೋಗಿದ್ದಾರೆ.
ಎರಡು ತಿಂಗಳ ಹಿಂದೆ ಮಧ್ಯವರ್ತಿಯೊಬ್ಬನ ಮೂಲಕ ಒಡಿಶಾದಿಂದ ಬೆಂಗಳೂರಿಗೆ 12 ಮಂದಿ ಬಂದಿದ್ದು, ಇವರುಗಳನ್ನು ಕಂಪನಿಯೊಂದಕ್ಕೆ ಕೆಲಸಕ್ಕಾಗಿ ಸೇರಿಸಲಾಗಿತ್ತು. ಇವರುಗಳ ಪೈಕಿ ಮೂವರಿಗೆ ವೇತನ ನೀಡದೆ ಸತಾಯಿಸಿದ್ದಲ್ಲದೆ ಥಳಿಸಿ ಚಿತ್ರ ಹಿಂಸೆ ನೀಡಲಾಗಿತ್ತು ಎಂದು ಹೇಳಲಾಗಿದೆ.
ಹೀಗಾಗಿ ಇದರಿಂದ ಪಾರಾಗುವ ಸಲುವಾಗಿ ಕಾಟರ್ ಮಾಂಜಿ, ಬಿಕರ್ ಮಾಂಜಿ ಹಾಗೂ ಬುಡು ಮಾಜಿ ಎಂಬ ಮೂವರು ಕಾರ್ಮಿಕರು ಫೆಬ್ರವರಿ 26ರಂದು ಬೆಂಗಳೂರಿನಿಂದ ನಡೆಯಲು ಆರಂಭಿಸಿದ್ದು, ಇವರ ಕಥೆ ಕೇಳಿ ಮರುಗಿದ ಕೋರಾಪುಟ್ ನಿವಾಸಿಯೊಬ್ಬರು ಆಹಾರ ನೀಡಿದ್ದಲ್ಲದೆ ಹಣ ಸಹಾಯ ಮಾಡಿ ಊರಿಗೆ ತೆರಳಲು ನೆರವಾಗಿದ್ದಾರೆ.