ಎಲಾನ್ ಮಸ್ಕ್‌ರ ಚಾಲಕರಹಿತ ಟೆಸ್ಲಾ ಕಾರು ಕೋವಿಡ್ ಕಾಲಘಟ್ಟದಲ್ಲೂ ಅಗಾಧವಾಗಿ ಟ್ರೆಂಡ್ ಆಗುತ್ತಿರುವ ವಿಷಯಗಳಲ್ಲಿ ಒಂದು.
ಈ ಕಾರಿಗೆ ಒಂದೊಳ್ಳೆ ಎಂಡಾರ್ಸ್‌ಮೆಂಟ್ ಆಗುವ ವಿಡಿಯೋವೊಂದು ವೈರಲ್ ಆಗಿದ್ದು, ಮೂವರು ಯುವಕರು 105ಕಿಮೀ/ಗಂಟೆ ವೇಗದಲ್ಲಿ ಚಲಿಸುತ್ತಿರುವ ಚಾಲಕರಹಿತ ಟೆಸ್ಲಾ ಕಾರಿನಲ್ಲಿ ಕುಡಿದು, ಕುಣಿಯುತ್ತಿರುವುದನ್ನು ಇದರಲ್ಲಿ ನೋಡಬಹುದಾಗಿದೆ.
ಈ ಜಾಲಿರೈಡ್‌ನ ತುಣುಕನ್ನು ಟಿಕ್‌ಟಾಕ್‌ನಲ್ಲಿ ಶೇರ್ ಮಾಡಲಾಗಿದ್ದು, ಎರಡು ಮಿಲಿಯನ್ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.
ಕಾರಿನಲ್ಲಿ ಚಾಲಕರಿಗೆ ಸಹಾಯ ಮಾಡಲೆಂದು ಕೊಟ್ಟಿರುವ ವ್ಯವಸ್ಥೆಯನ್ನು ಬಳಸಲು ಸದಾ ಎಚ್ಚರಿಕೆಯಿಂದರುವ ಚಾಲಕ ತನ್ನ ಕೈಗಳನ್ನು ಸ್ಟಿಯರಿಂಗ್ ಮೇಲೆ ಇಟ್ಟುಕೊಂಡೇ ಇರಬೇಕೆಂದೂ, ಆ ಮೂಲಕ ಯಾವುದೇ ಕ್ಷಣದಲ್ಲಿ ಅಚಾನಕ್ಕಾಗಿ ಎದುರಾಗುವ ಸನ್ನಿವೇಶವನ್ನು ನಿಭಾಯಿಸಲು ಸಿದ್ಧನಿರಬೇಕೆಂದು ಖುದ್ದು ಟೆಸ್ಲಾ ತನ್ನ ಜಾಲತಾಣದಲ್ಲಿ ಇದೇ ಕಾರುಗಳ ಕುರಿತು ಸೂಚನೆ ಕೊಟ್ಟಿದೆ.
ಚಾಲಕ ಸೀಟ್ ಬೆಲ್ಟ್ ಧರಿಸದೇ ಇದ್ದಲ್ಲಿ ಹಾಗೂ ತನ್ನ ಕೈಗಳನ್ನು ಸ್ಟಿಯರಿಂಗ್ ಮೇಲೆ ಇಡದೇ ಇದ್ದಲ್ಲಿ ಟೆಸ್ಲಾ ಆತನನ್ನು ಅಲರ್ಟ್ ಮಾಡುತ್ತದೆ.