ಅಯೋಧ್ಯೆಯಲ್ಲಿ ಜ.22 ರಂದು ರಾಮ ಮಂದಿರ ಉದ್ಘಾಟನೆಯಾಗುತ್ತಿದ್ದು, ಈ ಹಿನ್ನೆಲೆ ಎಲ್ಲೆಡೆ ಸಕಲ ಸಿದ್ದತೆಗಳು ಆರಂಭವಾಗಿದೆ.
ಧಾರವಾಡದಲ್ಲಿ ರಾಮನ ಧ್ವಜ ತಯಾರಿಕೆ ಕೆಲಸ ಜೋರಾಗಿ ನಡೆಯುತ್ತಿದೆ. ನಗರದ ಮರಾಠ ಗಲ್ಲಿಯಲ್ಲಿರುವ ಪ್ರತೀಶ್ ಜಾಧವ್ ಅವರಿಗೆ ರಾಮ, ಹನುಮಂತನ 3 ಲಕ್ಷ ಧ್ವಜ ಬೇಕೆಂದು ಆರ್ಡರ್ ಬಂದಿದ್ದು, ಧ್ವಜ ತಯಾರಿಸುವ ಕೆಲಸ ಮಾಡುವಲ್ಲಿ ಬ್ಯುಸಿಯಾಗಿದ್ದಾರೆ.
ಪ್ರತಿದಿನ ಒಬ್ಬರು 2 ಸಾವಿರಕ್ಕೂ ಹೆಚ್ಚು ಧ್ವಜ ತಯಾರಿ ಮಾಡುತ್ತಿದ್ದು, ಇದರಿಂದ ಹಲವರಿಗೆ ಕೆಲಸ ಸಿಕ್ಕಿದೆ. ಇವರಿಗೆ ಹೊರ ರಾಜ್ಯದಿಂದ ಕೂಡ ಧ್ವಜಕ್ಕೆ ಆರ್ಡರ್ ಬರುತ್ತಿದ್ದು, ಈಗಾಗಲೇ 1.5 ಲಕ್ಷ ಧ್ವಜ ಕಳುಹಿಸಿಕೊಟ್ಟಿದ್ದಾರೆ. ಕರ್ನಾಟಕ ಮಾತ್ರವಲ್ಲದೇ ಪಕ್ಕದ ಗೋವಾ, ತೆಲಂಗಾಣ ಹಾಗೂ ಆಂಧ್ರದಿಂದಲೂ ಧ್ವಜಕ್ಕೆ ಆರ್ಡರ್ ಬರುತ್ತಿದೆಯಂತೆ.