ಚೆನ್ನೈ: ಭಾರಿ ಮಳೆಯಿಂದಾಗಿ ಸಮುದಾಯಭವನದ ಮೇಲ್ಛಾವಣಿ ಕುಸಿದುಬಿದ್ದ ಪರಿಣಾಮ ಮೂವರು ಸಾವನ್ನಪ್ಪಿರುವ ದಾರುಣ ಘಟನೆ ತಮಿಳುನಾಡಿನ ತಿರುಪ್ಪುರ್ ನಲ್ಲಿ ಸಂಭವಿಸಿದೆ.
ಮುರಳಿ, ಮಣಿಕಂದನ್ ಹಾಗೂ ಗೌತಮ್ ಮೃತ ದುರ್ದೈವಿಗಳು. ಮೂವರು ಬಸ್ ಗಾಗಿ ಕಾಯುತ್ತಿದ್ದರು. ಈ ವೇಳೆ ದಿಢೀರ್ ಮಳೆ ಆರಂಭವಾಗಿದೆ. ಮಳೆಯಿಮ್ದ ರಕ್ಷಣೆ ಪಡೆಯಲು ಮೂವರು ಪಕ್ಕದಲ್ಲಿದ್ದ ಸಮುದಾಯ ಭವನದಲ್ಲಿ ಆಶ್ರಯಪಡಿದ್ದಾರೆ. ದುರದೃಷ್ಟವಶಾತ್ ಅವರು ಆಶ್ರಯ ಪಡೆದಿದ್ದ ಸಮುದಾಯ ಭವನದ ಕಟ್ಟಡದ ಕಟ್ಟದ ಮೇಲ್ಛಾವಣಿ ಏಕಾಏಕಿ ಕುಸಿದುಬಿದ್ದಿದೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು, ಅವಶೇಷಗಳಡಿ ಸಿಲುಕಿದ್ದ ಮೂವರನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಮೂವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.