
ಮಾಸ್ಕೋ: ಮಾಸ್ಕೋ ಪ್ರದೇಶದಲ್ಲಿ ವಿಮಾನವೊಂದು ಪತನಗೊಂಡು ಮೂವರು ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ತುರ್ತು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ರಷ್ಯಾದ ವಿನ್ಯಾಸದ ಸೂಪರ್ ಜೆಟ್ 100 ವಿಮಾನವು ಮಾಸ್ಕೋ ಪ್ರದೇಶದ ಕೊಲೊಮೆನ್ಸ್ಕಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಬಿದ್ದಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ತಿಳಿಸಿದೆ.
ನಿಗದಿತ ದುರಸ್ತಿಯ ನಂತರ ಪರೀಕ್ಷಾ ಹಾರಾಟದ ಸಮಯದಲ್ಲಿ ಅಪಘಾತ ಸಂಭವಿಸಿದೆ. ಸ್ಥಳೀಯ ಜನರಲ್ಲಿ ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಈ ಕುರಿತಾಗಿ ಇನ್ನಷ್ಟು ವಿವರ ನಿರೀಕ್ಷಿಸಲಾಗಿದೆ.