alex Certify 48 ಗಂಟೆಗಳಲ್ಲಿ 3 ಅಂತಾರಾಷ್ಟ್ರೀಯ ವಿಮಾನಯಾನ ಭಾರತದಲ್ಲಿ ತುರ್ತು ಭೂಸ್ಪರ್ಶ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

48 ಗಂಟೆಗಳಲ್ಲಿ 3 ಅಂತಾರಾಷ್ಟ್ರೀಯ ವಿಮಾನಯಾನ ಭಾರತದಲ್ಲಿ ತುರ್ತು ಭೂಸ್ಪರ್ಶ….!

ಭಾರತದ ವಿಮಾನಗಳು ಕರಾಚಿಯಲ್ಲಿ ಭೂಸ್ಪರ್ಶ ಮಾಡಿದ ಬೆನ್ನಲ್ಲೇ ಇಂಥದ್ದೇ ಬೆಳವಣಿಗೆ ಮತ್ತಷ್ಟು ನಡೆದಿವೆ. ಅಂತರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳ ಮೂರು ವಿಮಾನಗಳು 48 ಗಂಟೆಗಳ ಅವಧಿಯಲ್ಲಿ ಭಾರತದ ವಿವಿಧ ವಿಮಾನ ನಿಲ್ದಾಣಗಳಲ್ಲಿ ತುರ್ತು ಲ್ಯಾಂಡಿಂಗ್ ಮಾಡಿವೆ.

ಶುಕ್ರವಾರ ಮತ್ತು ಶನಿವಾರ ಕ್ಯಾಲಿಕಟ್, ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ಈ ಲ್ಯಾಂಡಿಂಗ್‌ ಮಾಡಲಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಹೈಡ್ರಾಲಿಕ್ ಸಮಸ್ಯೆಗಳಿಂದಾಗಿ ಕೊಚ್ಚಿನ್‌ನಲ್ಲಿ ಏರ್ ಅರೇಬಿಯಾ ಮತ್ತು ಒತ್ತಡದ ಸಮಸ್ಯೆಯಿಂದಾಗಿ ಕೋಲ್ಕತ್ತಾದಲ್ಲಿ ಇಥಿಯೋಪಿಯನ್ ವಿಮಾನ ಲ್ಯಾಂಡ್ ಮಾಡಲಾಯಿತು ಎಂದು ಅಧಿಕಾರಿ ಹೇಳಿದ್ದಾರೆ.‌ ಈ ಎಲ್ಲಾ ಘಟನೆಗಳ ಬಗ್ಗೆ ವಿವರವಾದ ತನಿಖೆಗೆ ಡಿಜಿಸಿಎ ಆದೇಶಿಸಿದೆ.

ಶನಿವಾರದ ಮತ್ತೊಂದು ಘಟನೆಯಲ್ಲಿ, ಅಡಿಸ್ ಅಬಾಬಾದಿಂದ ಬ್ಯಾಂಕಾಕ್‌ಗೆ ತೆರಳುತ್ತಿದ್ದ ಇಥಿಯೋಪಿಯನ್ ಏರ್‌ಲೈನ್ಸ್‌ನ ವಿಮಾನವು ಒತ್ತಡದ ಸಮಸ್ಯೆಯಿಂದಾಗಿ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು.

ಜುಲೈ 15 ರಂದು ಇದೇ ರೀತಿಯ ಮೂರನೇ ಘಟನೆಯಲ್ಲಿ, ಶ್ರೀಲಂಕನ್ ಏರ್‌ಲೈನ್ಸ್ ವಿಮಾನವು ಹೈಡ್ರಾಲಿಕ್ ಸಮಸ್ಯೆಯಿಂದಾಗಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು.

ಈ ಮಧ್ಯೆ ಶಾರ್ಜಾದಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ಇಂಡಿಗೋ ವಿಮಾನವನ್ನು ಮುಂಜಾನೆ ಪಾಕಿಸ್ತಾನದ ಕರಾಚಿಗೆ ತಿರುಗಿಸಲಾಯಿತು. ಪೈಲಟ್ ತಾಂತ್ರಿಕ ದೋಷವನ್ನು ಗಮನಿಸಿ ಮುನ್ನೆಚ್ಚರಿಕೆಯಾಗಿ ವಿಮಾನವನ್ನು ಕರಾಚಿಗೆ ತಿರುಗಿಸಲಾಗಿತ್ತು ಎಂದು ಇಂಡಿಗೋ ಹೇಳಿಕೆಯಲ್ಲಿ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...