ಬೆಂಗಳೂರಿನ ಅರಮನೆ ಮೈದಾನದಲ್ಲಿ ನಾಳೆಯಿಂದ 3 ದಿನ ‘ಸಿರಿಧಾನ್ಯ ವಾಣಿಜ್ಯ ಅಂತರಾಷ್ಟ್ರೀಯ ಮೇಳ’ ನಡೆಯಲಿದ್ದು, ನಾಳೆ ಬೆಳಗ್ಗೆ 11 ಗಂಟೆಗೆ ಚಾಲನೆ ಸಿಗಲಿದೆ.
ಜ.5ರಂದು ಬೆಳಗ್ಗೆ 11 ಗಂಟೆಗೆ ಮೇಳ ಉದ್ಘಾಟನೆಯಾಗಲಿದ್ದು, ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಕೇಂದ್ರ, ರಾಜ್ಯ ಸಚಿವರು ಪಾಲ್ಗೊಳ್ಳಲಿದ್ದಾರೆ. ಕರ್ನಾಟಕ ಕೃಷಿ ಇಲಾಖೆಯು ಹಲವಾರು ಇಲಾಖೆಗಳ ಸಹಯೋಗದಲ್ಲಿ ಅಂತರಾಷ್ಟ್ರೀಯ ಸಿರಿಧಾನ್ಯ ಸಾವಯವ ಮೇಳವನ್ನು ಆಯೋಜಿಸಿದೆ.
ರಾಷ್ಟ್ರೀಯ ಮತ್ತು ಅಂತರ್ ರಾಷ್ಟ್ರೀಯ ಮಟ್ಟದ ಜಿಐಜಡ್, ಸಿಎಫ್ಟಿಆರ್ ಐ, ಐಐಎಂಆರ್ ಸಂಶೋಧನಾ ಸಂಸ್ಥೆಗಳು ಮೇಳದ ಪಾಲ್ಗೊಳ್ಳಲಿವೆ. ಉತ್ತರ ಪ್ರದೇಶ, ಪಂಜಾಬ್, ಆಂಧ್ರ, ಮಹಾರಾಷ್ಟ್ರ, ಒಡಿಸ್ಸಾ, ತಮಿಳುನಾಡು ಮತ್ತು ಮೇಘಾಲಯ ಸೇರಿದಂತೆ ಇನ್ನಿತರ ರಾಜ್ಯಗಳು ಪಾಲ್ಗೊಳ್ಳಲಿದ್ದು, 300 ಮಳಿಗೆಗಳನ್ನು ಸ್ಥಾಪಿಸಲಿದೆ.
ದೇಶ ಹಾಗೂ ಹೊರ ದೇಶದಿಂದಲೂ ಸಾವಯವ ಬೆಳೆಗಾರರು, ಮಾರಾಟಗಾರರು, ಸಿರಿಧಾನ್ಯಕ್ಕೆ ಸಂಬಂಧಿಸಿದ ಸಂಸ್ಥೆಗಳು ಭಾಗಿಯಾಗಲಿವೆ. ಜರ್ಮನ್, ಸೌದಿ ಅರೇಬಿಯಾ, ಒಮನ್, ಆಸ್ಟ್ರೇಲಿಯಾ ಸೇರಿದಂತೆ ಏಳೆಂಟು ರಾಷ್ಟ್ರಗಳು ಮೇಳದಲ್ಲಿ ಪಾಲ್ಗೊಳ್ಳುತ್ತಿವೆ. ರೈತರಿಗೂ ಕೃಷಿ ವಿವಿಯಿಂದ ಕಾರ್ಯಗಾರ ಆಯೋಜಿಸಲಾಗುತ್ತಿದೆ.
ಮೇಳದಲ್ಲಿ ಹತ್ತು ವಿವಿಧ ಸಿರಿಧಾನ್ಯ ಹೋಟೆಲ್ಗಳು ಇರಲಿದ್ದು, ವೈವಿಧ್ಯ ಮತ್ತು ರುಚಿಕರವಾದ ಸಿರಿಧಾನ್ಯ ಊಟ ಮತ್ತು ಉಪಹಾರ ಸವಿಯುವ ಅವಕಾಶವಿದೆ. 35ಕ್ಕೂ ಹೆಚ್ಚು ಪ್ರಖ್ಯಾತ ಉಪನ್ಯಾಸಕರು ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಾಹಿತಿ ನೀಡಲಿದ್ದಾರೆ.