ಬೆಂಗಳೂರು : ಗೃಹಲಕ್ಷ್ಮಿ ಯೋಜನೆಗಳ ಸಮಸ್ಯೆ ನಿವಾರಿಸಲು ಸರ್ಕಾರ ಬಿಗ್ ಪ್ಲ್ಯಾನ್ ಮಾಡಿದ್ದು, ಡಿ.27 ರ ನಾಳೆಯಿಂದ ಡಿ.29 ರವರೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ಯಾಂಪ್ ನಡೆಸಲು ಸಿದ್ಧತೆ ನಡೆಸಿದೆ.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿ ಯಜಮಾನಿಯರಿಗೆ 2,000 ರೂ. ನೀಡಲಾಗುತ್ತಿದ್ದು, ಯಾರ ಖಾತೆಗೆ ಹಣ ಬಂದಿಲ್ಲ ಅವರಿಗೆ ರಾಜ್ಯ ಸರ್ಕಾರವೇ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಗೆ ಪರಿಹಾರ ನೀಡಲಿದೆ.
ಪ್ರತಿ ಗ್ರಾಮ ಪಂಚಾಯತ್ ನಲ್ಲಿ ಡಿ.27 ರಿಂದ ಡಿ. 29 ರವರೆಗೆ ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಕ್ಯಾಂಪ್ ಆಯೋಜಿಸುವಂತೆ ಸೂಚನೆ ನೀಡಲಾಗಿದೆ.
ಪಿಡಿಒಗಳ ನೇತೃತ್ವದಲ್ಲಿ ಕ್ಯಾಂಪ್ ಆಯೋಜನೆಯಾಗಲಿದ್ದು, ಈ ಕ್ಯಾಂಪ್ ನಲ್ಲಿ ಫಲಾನುಭವಿಗಳ ಸಮಸ್ಯೆ ಸರಿಪಡಿಸಲಾಗುತ್ತದೆ.ಪ್ರತಿ ಗ್ರಾಮ ಪಂಚಾಯತ್ ನಲ್ಲಿ ಕ್ಯಾಂಪ್ ನಡೆಯಲಿದ್ದು, ಸ್ಥಳೀಯ ಬಾಪೂಜಿ ಸೇವಾ ಕೇಂದ್ರದ ಕಂಪ್ಯೂಟರ್ ಆಪರೇಟರ್ ಗಳು, ಅಂಗನವಾಡಿ ಕಾರ್ಯಕರ್ತರು ಭಾಗಿಯಾಗುವಂತೆ ಸೂಚಿಸಲಾಗಿದೆ.