alex Certify ಎಟಿಎಂ ಮಿತಿ ನಂತರ ಶುಲ್ಕ ಹೆಚ್ಚಳ ಆತಂಕದಲ್ಲಿದ್ದವರಿಗೆ ಗುಡ್ ನ್ಯೂಸ್: ಈ ಬ್ಯಾಂಕ್ ಗಳಲ್ಲಿ ಫುಲ್ ಫ್ರೀ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಟಿಎಂ ಮಿತಿ ನಂತರ ಶುಲ್ಕ ಹೆಚ್ಚಳ ಆತಂಕದಲ್ಲಿದ್ದವರಿಗೆ ಗುಡ್ ನ್ಯೂಸ್: ಈ ಬ್ಯಾಂಕ್ ಗಳಲ್ಲಿ ಫುಲ್ ಫ್ರೀ

ಉಚಿತ ಬಳಕೆಯ ಮಿತಿ ಮುಗಿದ ಕೂಡಲೇ ಮಾಡುವ ಪ್ರತಿಯೊಂದು ಎಟಿಎಂ ವ್ಯವಹಾರದ ಮೇಲೆ ವಿಧಿಸುವ ಶುಲ್ಕವನ್ನು ಹೆಚ್ಚಿಸಲು ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ದೇಶದ ಎಲ್ಲಾ ಬ್ಯಾಂಕುಗಳಿಗೆ ಅವಕಾಶ ಕೊಟ್ಟಿದೆ. ಎಟಿಎಂ ಕಾರ್ಯಾಚರಣಾ ಶುಲ್ಕ ಹಾಗೂ ಹೆಚ್ಚಿನ ಅಂತರ್ಬಳಕೆ ಶುಲ್ಕಗಳನ್ನು ಭರಿಸಿಕೊಳ್ಳಲು ಬ್ಯಾಂಕುಗಳಿಗೆ ಈ ಅವಕಾಶವನ್ನು ಕೇಂದ್ರ ಬ್ಯಾಂಕ್ ಮಾಡಿಕೊಟ್ಟಿದೆ.

ಸದ್ಯಕ್ಕೆ ಬಹುತೇಕ ಖಾಸಗಿ ಹಾಗೂ ಸಾರ್ವಜನಿಕ ಬ್ಯಾಂಕುಗಳು, ಪ್ರತಿ ತಿಂಗಳಿಗೆ, ನಗರ ಪ್ರದೇಶದಲ್ಲಿ ಮೂರು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಐದು ನಿಶ್ಶುಲ್ಕ ವ್ಯವಹಾರಗಳಿಗೆ ಅವಕಾಶ ಕೊಡುತ್ತಿವೆ. ಈ ನಿಶ್ಶುಲ್ಕ ವ್ಯವಹಾರಗಳ ಮಿತಿ ಮುಗಿದ ಬಳಿಕ ಪ್ರತಿ ಬಾರಿ ಹಣ ಹಿಂಪಡೆಯುವಾಗ ವಿಧಿಸುವ ಶುಲ್ಕವನ್ನು 20 ರೂ.ಗಳಿಂದ 21 ರೂ.ಗಳಿಗೆ ಏರಿಸಲಾಗಿದೆ.

SBI ಎಟಿಎಂ ಕಾರ್ಡ್ ಕಳೆದುಕೊಂಡಿದ್ದೀರಾ…? ಹಾಗಾದ್ರೆ ಕಾರ್ಡ್ ಬ್ಲಾಕ್ ಮಾಡುವುದು ಹೇಗೆ ತಿಳಿಯಿರಿ

ಇದೇ ವೇಳೆ ಅಂತರ್ಬದಲಾವಣೆಯ ಶುಲ್ಕವನ್ನು 16 ರೂ.ನಿಂದ 17ರೂ.ಗೆ ಏರಿಸಲು ಆರ್‌ಬಿಐ ಬ್ಯಾಂಕುಗಳಿಗೆ ಅವಕಾಶ ಕೊಟ್ಟಿದೆ. ಯಾವ ಬ್ಯಾಂಕಿನ ಎಟಿಎಂನಿಂದ ಹಣ ಪಡೆಯಲಾಗಿದೆಯೋ ಆ ಬ್ಯಾಂಕಿಗೆ ಕಾರ್ಡ್ ವಿತರಿಸಿದ ಬ್ಯಾಂಕ್ ತೆರುವ ಶುಲ್ಕವೇ ಅಂತರ್ಬದಲಾವಣೆ ಶುಲ್ಕವಾಗಿದೆ. ಎಟಿಎಂಗಳ ಮೂಲಕ ಮಾಡಲಾಗುವ ನಾಮಿನಲ್ ವ್ಯವಹಾರಗಳವೊಂದಕ್ಕೆ ಇದ್ದ ಶುಲ್ಕವನ್ನು 5 ರೂ.ನಿಂದ 6ರೂ.ಗೆ ಏರಿಸಲಾಗಿದೆ.

ಇದೇ ವೇಳೆ ದೇಶದ ಮೂರು ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಅನಿಯಮಿತವಾಗಿ ಉಚಿತ ಎಟಿಎಂ ವ್ಯವಹಾರಗಳನ್ನು ಮಾಡಿಕೊಳ್ಳಲು ಅವಕಾಶ ನೀಡುತ್ತಿವೆ. ಅವುಗಳೆಂದರೆ — ಇಂಡಸ್‌ಇಂಡ್‌ ಬ್ಯಾಂಕ್, ಐಡಿಬಿಐ ಬ್ಯಾಂಕ್ ಹಾಗೂ ಸಿಟಿ ಬ್ಯಾಂಕ್.

ಯಾರೀ ಆಯಿಶಾ ಸುಲ್ತಾನಾ….? ಇಲ್ಲಿದೆ ಮಾಹಿತಿ

ಸಿಟಿ ಬ್ಯಾಂಕ್ ಶೀಘ್ರದಲ್ಲೇ ಭಾರತದಲ್ಲಿ ತನ್ನ ಕಾರ್ಯಚಟುವಟಿಕೆಯನ್ನು ಕೊನೆಗೊಳಿಸಲು ನೋಡುತ್ತಿದ್ದರೆ, ಇಂಡಸ್‌ಇಂಡ್‌ ಹಾಗೂ ಐಡಿಬಿಐ ಬ್ಯಾಂಕುಗಳು ಭಾರತದಲ್ಲಿರುವ ತಮ್ಮ ಗ್ರಾಹಕರಿಗೆ ಸೇವೆಗಳನ್ನು ಒದಗಿಸುವುದನ್ನು ಮುಂದುವರೆಸಲಿವೆ.

ಐಡಿಬಿಐ ತನ್ನದೇ ಎಟಿಎಂಗಳಲ್ಲಿ ಅನಿಯಮಿತವಾಗಿ ನಿಶ್ಶುಲ್ಕ ಸೇವೆಗಳನ್ನು ಕೊಟ್ಟರೆ, ಇತರೆ ಬ್ಯಾಂಕುಗಳ ಎಟಿಎಂಗಳಲ್ಲಿ ಐದು ವ್ಯವಹಾರಗಳ ಮಟ್ಟಿಗೆ ನಿಶ್ಶುಲ್ಕ ಸೇವೆಗಳನ್ನು ಕೊಡುತ್ತದೆ.

ಇಂಡಸ್‌ಇಂಡ್‌ ಬ್ಯಾಂಕ್ ಕಾರ್ಡ್‌‌ದಾರರು ದೇಶಾದ್ಯಂತ ಯಾವುದೇ ಬ್ಯಾಂಕ್‌ನಲ್ಲಾದರೂ ಅನಿಯಮಿತವಾಗಿ ಉಚಿತ ವ್ಯವಹಾರಗಳನ್ನು ಮಾಡಬಹುದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...