ನ್ಯಾಯಾಂಗದ ಎಲ್ಲಾ ದಾಖಲಾತಿಗಳನ್ನು ಎ 4 ಕಾಗದದ ಎರಡೂ ಬದಿಗಳಲ್ಲಿ ಮುದ್ರಿಸಲು ಅನುಮತಿಸಿದ ಸುಪ್ರೀಂ ಕೋರ್ಟ್ನ ನಿರ್ಧಾರವು ಕಳೆದ 2 ವರ್ಷಗಳಲ್ಲಿ ಸರಿಸುಮಾರು 3 ಕೋಟಿಗೂ ಅಧಿಕ ಕಾಗದದ ಹಾಳೆಗಳನ್ನು ಉಳಿಸಿದೆ ಎನ್ನಲಾಗಿದೆ.
ನ್ಯಾಯಮೂರ್ತಿಗಳಾದ ಎಸ್. ರವೀಂದ್ರ ಭಟ್ ಹಾಗೂ ಹೇಮಂತ್ ಗುಪ್ತಾ ನೇತೃತ್ವದ ಸಮಿತಿಯು ಶಿಫಾರಸು ಮಾಡಿದ ಬಳಿಕ 2020ರ ಏಪ್ರಿಲ್ನಲ್ಲಿ ಒಂದು ಬದಿ ಮಾತ್ರ ಮುದ್ರಣ ಮಾಡುವುದನ್ನು ಬಿಟ್ಟು ಕಾಗದದ ಎರಡೂ ಕಡೆಗಳಲ್ಲಿ ಮುದ್ರಣ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಯಿತು.
ಕಾಗದಗಳನ್ನು ಉಳಿಸುವ ಮೂಲಕ ಪರಿಸರವನ್ನು ಸಂರಕ್ಷಿಸುವ ಕ್ರಮವಾಗಿ ಅಂದಿನ ಮುಖ್ಯನ್ಯಾಯಮೂರ್ತಿ ಎನ್ ಎ ಬೋಬ್ಡೆ ಸಮಿತಿಯನ್ನು ರಚಿಸುವ ನಿರ್ಧಾರವನ್ನು ಕೈಗೊಂಡಿದ್ದರು.
ನ್ಯಾಯಮೂರ್ತಿಗಳಾದ ಭಟ್ ಮತ್ತು ಗುಪ್ತಾ ಸಮಿತಿಯು ಆರಂಭದಲ್ಲಿ ಕೆಲವು ಕಡೆಗಳಿಂದ ವಿರೋಧವನ್ನು ಎದುರಿಸಿತು, ಆದರೆ ಏಪ್ರಿಲ್ 1, 2020 ರಲ್ಲಿ, ನ್ಯಾಯಾಲಯವು ನಿರ್ಧಾರವನ್ನು ಕೈಗೊಳ್ಳಲು ನಿರ್ಧರಿಸಿತು ಮತ್ತು ಫೈಲಿಂಗ್ ಅನ್ನು ಲೀಗಲ್ ಕಾಗದದ ಬದಲು A4 ಗಾತ್ರದ ಪೇಪರ್‌ಗಳಲ್ಲಿ ಮಾಡಬೇಕೆಂದು ಆದೇಶಿಸಿತು.
ಲೀಗಲ್ ಗಾತ್ರದ ಕಾಗದವು 35.56 cm x 21.59 cm ಆಯಾಮಗಳನ್ನು ಹೊಂದಿದೆ ಮತ್ತು A4 ಗಾತ್ರದ ಕಾಗದಕ್ಕಿಂತ ಸರಿಸುಮಾರು 23 ಶೇಕಡಾ ದೊಡ್ಡದಾಗಿದೆ.