alex Certify ದ್ವಿತೀಯ ಪಿಯುಸಿ-2 ಪರೀಕ್ಷಾ ವೇಳಾಪಟ್ಟಿ ಪ್ರಕಟ; ನಾಳೆಯಿಂದಲೇ ಎಕ್ಸಾಂ ಆರಂಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದ್ವಿತೀಯ ಪಿಯುಸಿ-2 ಪರೀಕ್ಷಾ ವೇಳಾಪಟ್ಟಿ ಪ್ರಕಟ; ನಾಳೆಯಿಂದಲೇ ಎಕ್ಸಾಂ ಆರಂಭ

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆದ ವಿದ್ಯಾರ್ಥಿಗಳಿಗಾಗಿ ಪರೀಕ್ಷೆ ದಿನಾಂಕ ಪ್ರಕಟಿಸಲಾಗಿದೆ. ಏಪ್ರಿಲ್ 29ರಿಂದಲೇ ಪರೀಕ್ಷೆ ಆರಂಭವಾಗಲಿದೆ.

ದ್ವಿತೀಯ ಪಿಯುಸಿ ಫೇಲ್ ಆದ ವಿದ್ಯಾರ್ಥಿಗಳಿಗೆ ಈಬಾರಿ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಳಿ ಎರಡು ಅವಕಾಶಗಳನ್ನು ನೀಡಿದೆ. ಕಳೆದ ತಿಂಗಳಷ್ಟೇ ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿದ್ದು, ಅನುತ್ತೀರ್ಣಗೊಂದಿರುವ ವಿದ್ಯಾರ್ಥಿಗಳಿಗಾಗಿ ಒಂದೇ ವಾರದಲ್ಲಿ ಮತ್ತೊಂದು ಪರೀಕ್ಷೆ ನಿಗದಿಯಾಗಿದೆ.

ದ್ವಿತೀಯ ಪಿಯುಸಿ -2 ಪರೀಕ್ಷಾ ವೇಳಾ ಪಟ್ಟಿ ಹೀಗಿದೆ:
29-04-29 ರಿಂದ 16-05-2024 ರವರೆಗೆ ಪಿಯುಸಿ ಪರೀಕ್ಷೆ -2 ನಡೆಯಲಿದೆ.
29-04-2024- ಕನ್ನಡ, ಅರೇಬಿಕ್
30-04-2024-ಇತಿಹಾಸ / ಭೌತಶಾಸ್ತ್ರ
02-05-2024-ಇಂಗ್ಲಿಷ್
03-05-2024-ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
04-05-2024-ಭೂಗೋಶಾಸ್ತ್ರ, ಮನಃಶಾಸ್ತ್ರ, ರಸಾಯನಶಾಸ್ತ್ರ, ಗೃಹವಿಜ್ಞಾನ, ಮೂಲಗಣಿತ
09-05-2024-ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಗಣಿತ, ಶಿಕ್ಷಣಶಾಸ್ತ್ರ
11-05-2024-ಸಮಾಜಶಾಸ್ತ್ರ, ಭೂಗರ್ಭಶಾಸ್ತ್ರ, ಜೀವಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ
13-05-2024-ಅರ್ಥಶಾಸ್ತ್ರ
14-05-2024-ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ
15-05-2024-ಹಿಂದಿ
16-05-2024-ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಅರೆಬಿಕ್, ಫ್ರೆಂಚ್
16-05-2024-ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ಬ್ಯೂಟಿ ಅಂಡ್ವೆಲ್‌ನೆಸ್‌ , ಆಟೋಮೊಬೈಲ್, ರೀಟೈಲ್ ಪರೀಕ್ಷೆಗಳು ನಡೆಯಲಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...