ಭಾನುವಾರ ದಕ್ಷಿಣ ಕೊರಿಯಾದ ಮುವಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 181 ಪ್ರಯಾಣಿಕರಿದ್ದ ವಿಮಾನವು ರನ್ವೇಯಿಂದ ಜಾರಿ ಬೇಲಿಗೆ ಡಿಕ್ಕಿ ಹೊಡೆದು ಭಾರಿ ಬೆಂಕಿ ತಗುಲಿದ್ದು, 29 ಜನರು ಸಾವನ್ನಪ್ಪಿದ್ದಾರೆ. ಮತ್ತು ಹಲವರು ಗಾಯಗೊಂಡಿದ್ದಾರೆ.
ಬ್ಯಾಂಕಾಕ್ ನಿಂದ ಬಂದ ಜೆಜು ಏರ್ ವಿಮಾನವು 175 ಪ್ರಯಾಣಿಕರು ಮತ್ತು 6 ಸಿಬ್ಬಂದಿಯನ್ನು ಹೊತ್ತ ಮುವಾನ್ ವಿಮಾನ ನಿಲ್ದಾಣದಲ್ಲಿ ಕ್ರ್ಯಾಶ್-ಲ್ಯಾಂಡ್ ಆಗುವಾಗ ಈ ಘಟನೆ ಸಂಭವಿಸಿದೆ. ಕನಿಷ್ಠ 29 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.
ಮುವಾನ್ನಲ್ಲಿನ ವಿಮಾನ ನಿಲ್ದಾಣದಿಂದ ಗಾಳಿಯಲ್ಲಿ ಕಪ್ಪು ಹೊಗೆ ಹೊರಹೊಮ್ಮುವುದನ್ನು ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ. ಅಗ್ನಿಶಾಮಕ ದಳದವರು ನಂದಿಸುವ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಂತೆ ಒಬ್ಬ ವ್ಯಕ್ತಿ ಜೀವಂತವಾಗಿ ಕಂಡುಬಂದಿದ್ದಾರೆ.
ದಕ್ಷಿಣ ಕೊರಿಯಾದ ದಕ್ಷಿಣ ಜಿಯೋಲ್ಲಾ ಪ್ರಾಂತ್ಯದ ಪ್ರಮುಖ ಪ್ರಾದೇಶಿಕ ಕೇಂದ್ರವಾದ ನೈಋತ್ಯ ಕರಾವಳಿ ವಿಮಾನ ನಿಲ್ದಾಣದಲ್ಲಿ ಸ್ಥಳೀಯ ಸಮಯ ಬೆಳಗ್ಗೆ 9:07 ಕ್ಕೆ ಈ ಘಟನೆ ಸಂಭವಿಸಿದೆ. ಮುವಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದು ಇಂತಹ ಮೊದಲ ಪ್ರಮುಖ ಘಟನೆಯಾಗಿದೆ.
BREAKING: Video shows crash of Jeju Air Flight 2216 in South Korea. 181 people on board pic.twitter.com/9rQUC0Yxt8
— BNO News (@BNONews) December 29, 2024