alex Certify 2700 ವರ್ಷಗಳ ಹಿಂದೆ ಬಳಕೆಯಲ್ಲಿದ್ದ ಟಾಯ್ಲೆಟ್‌ ಪತ್ತೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2700 ವರ್ಷಗಳ ಹಿಂದೆ ಬಳಕೆಯಲ್ಲಿದ್ದ ಟಾಯ್ಲೆಟ್‌ ಪತ್ತೆ…!

ಭೂಗರ್ಭದಲ್ಲಿ ಏನೇನು ಅಡಗಿದೆ ಎಂಬುದು ಯಾರಿಗೂ ತಿಳಿದಿಲ್ಲ. ಕೌತುಕಗಳ ದೊಡ್ಡ ಭಂಡಾರವೇ ಭೂಮಿಯ ಒಡಲು. ಇಂಥ ಭೂಮಿಯನ್ನು ಅಗೆಯುವ ವೇಳೆ ಜೆರುಸಲೇಂನಲ್ಲಿ ಭೂವಿಜ್ಞಾನಿಗಳಿಗೆ ಟಾಯ್ಲೆಟ್‌ ಸೀಟೊಂದು ಸಿಕ್ಕಿದೆ.
ಬರೋಬ್ಬರಿ 2700 ವರ್ಷಗಳಷ್ಟು ಹಿಂದಿನ ಟಾಯ್ಲೆಟ್‌ ಸೀಟಂತೆ..!

ಇದರಲ್ಲಿ ಆಳವಾದ ಸೆಪ್ಟಿಕ್‌ ಟ್ಯಾಂಕ್‌ ಇದ್ದು, ಕೂರಲು ಅನುಕೂಲಕರ ರೀತಿಯಲ್ಲಿ ಸುಣ್ಣದ ಕಲ್ಲಿನಿಂದ ನಿರ್ಮಿಸಲಾದ ಟಾಯ್ಲೆಟ್‌ ಇದಾಗಿದೆ. ಟಾಯ್ಲೆಟ್‌ನ ಸುತ್ತಲೂ ಚೌಕಾಕಾರದ ಕೊಠಡಿ ಮಾದರಿಯೊಂದು ಕೂಡ ಪತ್ತೆಯಾಗಿದೆ.

1242 ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿ ನಿರೀಕ್ಷೆಯಲ್ಲಿದ್ದವರಿಗೆ ಶಾಕ್, ಕೆಎಟಿ ಮಧ್ಯಂತರ ತಡೆಯಾಜ್ಞೆ

ಸುಮಾರು 5020 ವರ್ಷಗಳಷ್ಟು ಪುರಾತನವಾದ ನಗರದಲ್ಲಿ ಇಂಥ ಶೌಚ ವ್ಯವಸ್ಥೆ ಸಿಕ್ಕಿರುವುದು, ಹಿಂದಿನ ಕಾಲದಲ್ಲಿನ ಜನರು ಯಾವ ರೀತಿ ಶೌಚಾಲಯಗಳನ್ನು ಬಳಸುತ್ತಿದ್ದರು ಎನ್ನುವ ಸಂಶೋಧನೆಗೆ ಪ್ರಮುಖವಾಗಿದೆ. ಆ ಕಾಲದ ಜನರ ಜೀವನಶೈಲಿ ಮತ್ತು ಜನಾಂಗದ ನಾಶಕ್ಕೆ ಕಾರಣವನ್ನು ಕೂಡ ಇಂಥ ವಸ್ತುಗಳಿಂದ ತಿಳಿಯಬಹುದು. ಪ್ರಮುಖವಾಗಿ ಆ ಕಾಲದಲ್ಲಿದ್ದ ಮಹಾಮಾರಿ ರೋಗಗಳ ಬಗ್ಗೆ ಸುಳಿವು ಸಿಗಲಿದೆ ಎಂದು ಪುರಾತತ್ವ ಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದೊಂದು ಅಪೂರ್ವ ಪ್ರಾಚೀನ ವಸ್ತು ಎಂದು ಅವರು ಶ್ಲಾಘಿಸಿದ್ದಾರೆ.

ಈ ರಾಶಿಯವರಿಗೆ ಇಂದು ಹರಿದು ಬರಲಿದೆ ವಿವಿಧ ಮೂಲಗಳಿಂದ ಧನ ಸಂಪತ್ತು

ಕಳೆದ ತಿಂಗಳು ಬ್ರಿಟನ್‌ನಲ್ಲಿ ಸಿಕ್ಕ ಅಸ್ಥಿಪಂಜರದ ಕಾಲಿನಲ್ಲಿ ರಹಸ್ಯಮಯವಾದ ದ್ರವ್ಯದ ಬಾಟಲಿಯೊಂದು ಪತ್ತೆಗೊಂಡಿತ್ತು. ನೀಲಿ ಗ್ಲಾಸ್‌ ಬಾಟಲಿಯಲ್ಲಿ ಮಣ್ಣಿನ ಬಣ್ಣದ ದ್ರವ್ಯ ಇತ್ತು. 60ರ ದಶಕದಲ್ಲಿ ಮೃತಪಟ್ಟ ಮಹಿಳೆಯ ಅಸ್ಥಿಪಂಜರದಲ್ಲಿ ಇಂಥ ದ್ರವ್ಯ ಸಿಕ್ಕಿದ್ದು ಪುರಾತತ್ವ ಶಾಸ್ತ್ರಜ್ಞರ ತಲೆಕೆಡಿಸಿತ್ತು. ಈಗಲೂ ಈ ಬಗ್ಗೆ ವಿಜ್ಞಾನಿಗಳು, ಸಂಶೋಧಕರು ಅಧ್ಯಯನ ಮುಂದುವರಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...