alex Certify ಸರ್ಕಾರದ ಮಹತ್ವದ ನಿರ್ಧಾರ: ಬಡವರು, ಹಿಂದುಳಿದ ವರ್ಗದವರಿಗೆ ಗುಡ್ ನ್ಯೂಸ್; ಮೆಡಿಕಲ್ ನಲ್ಲಿ ಮೀಸಲಾತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರದ ಮಹತ್ವದ ನಿರ್ಧಾರ: ಬಡವರು, ಹಿಂದುಳಿದ ವರ್ಗದವರಿಗೆ ಗುಡ್ ನ್ಯೂಸ್; ಮೆಡಿಕಲ್ ನಲ್ಲಿ ಮೀಸಲಾತಿ

ನವದೆಹಲಿ: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ(OBC) ಶೇಕಡ 27 ರಷ್ಟು, ಆರ್ಥಿಕವಾಗಿ ದುರ್ಬಲ ವರ್ಗದವರಿಗೆ(Economically Weaker Sections) ಶೇಕಡ 10 ರಷ್ಟು ಮೀಸಲಾತಿ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

ಈ ಶೈಕ್ಷಣಿಕ ವರ್ಷದಿಂದ ಎಂಬಿಬಿಎಸ್, ಎಂಡಿ, ಎಂಎಸ್, ಬಿಡಿಎಸ್, ಎಂಡಿಎಸ್ ಮತ್ತು ಡಿಪ್ಲೊಮಾ ವೈದ್ಯಕೀಯ ಕೋರ್ಸ್ ಗಳಿಗೆ ಇದು ಅನ್ವಯಿಸುತ್ತದೆ.

ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ಚುನಾವಣೆಯ ಸಂದರ್ಭದಲ್ಲಿ ಜಾತಿ ಮತ್ತು ಕೋಮು ದೊಡ್ಡ ಪಾತ್ರವಹಿಸುತ್ತವೆ. ಈ ತಿಂಗಳ ಆರಂಭದಲ್ಲಿ ಕೇಂದ್ರ ಸಚಿವ ಸಂಪುಟ ವಿಸ್ತರಣೆ ವೇಳೆ ಈ ಸಮುದಾಯಗಳಿಗೆ ವಿಶೇಷ ಒತ್ತು ನೀಡಲಾಗಿದೆ. ಮಂತ್ರಿಗಳ ಜಾತಿ ಮತ್ತು ಉಪಜಾತಿಯೊಂದಿಗೆ ವಿವರವಾದ ಮಾಹಿತಿಯನ್ನ ಮಾಧ್ಯಮಗಳಿಗೆ ಕಳುಹಿಸಿದಾಗ ಬಿಜೆಪಿ ಈ ಲೆಕ್ಕಾಚಾರವನ್ನು ಪ್ರದರ್ಶಿಸಿತ್ತು.

ಆರೋಗ್ಯ ಸಚಿವಾಲಯ ಮಾಹಿತಿ ಪ್ರಕಾರ, ಸೋಮವಾರ ನಡೆದ ಸಭೆಯಲ್ಲಿ ದೀರ್ಘಕಾಲದಿಂದ ಬಾಕಿ ಉಳಿದಿರುವ ಈ ಸಮಸ್ಯೆಗೆ ಪರಿಣಾಮಕಾರಿ ಪರಿಹಾರವನ್ನು ಒದಗಿಸಲು ಪಿಎಂ ಮೋದಿ ಸಂಬಂಧಪಟ್ಟ ಕೇಂದ್ರ ಸಚಿವಾಲಯಗಳಿಗೆ ನಿರ್ದೇಶನ ನೀಡಿದ್ದರು. ಬುಧವಾರ, ಒಬಿಸಿ ಸಮುದಾಯದ ಬಿಜೆಪಿ ಸಂಸದರ ಗುಂಪು ಇದೇ ವಿಷಯದ ಬಗ್ಗೆ ಪ್ರಧಾನ ಮಂತ್ರಿಯವರನ್ನು ಭೇಟಿ ಮಾಡಿತ್ತು.

ಈ ನಿರ್ಧಾರದಿಂದ MBBS ನಲ್ಲಿ ಸುಮಾರು 1,500 ಮತ್ತು ಸ್ನಾತಕೋತ್ತರ ಪದವಿಯಲ್ಲಿ 2,500 OBC ವಿದ್ಯಾರ್ಥಿಗಳಿಗೆ ಮತ್ತು MBBS ನಲ್ಲಿ ಸುಮಾರು 550 ಮತ್ತು ಸ್ನಾತಕೋತ್ತರ ಪದವಿಯಲ್ಲಿ ಸುಮಾರು 1,000 EWS ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...