ಕೊಪ್ಪಳ: ಅಂಜನಾದ್ರಿ ಬೆಟ್ಟದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಭರ್ಜರಿ ಕಾಣಿಕೆ ಸಂಗ್ರಹವಾಗಿದ್ದು, 22 ದಿನಗಳಲ್ಲಿ 27 ಲಕ್ಷ ಕಾಣಿಕೆ ಸಂಗ್ರಹವಾಗಿದೆ.
ಗಂಗಾವತಿ ತಾಲೂಕು ಆಡಳಿತದ ವತಿಯಿಂದ ಎಣಿಕೆ ಮಾಡಲಾಗಿದ್ದು, ಡಿಸೆಂಬರ್ 14 ರಿಂದ 2024ರ ಜನವರಿ 5 ರವರೆಗೆ ಹುಂಡಿಯಲ್ಲಿ ಒಟ್ಟು 27,27,761 ರೂಪಾಯಿಗಳು ಸಂಗ್ರಹವಾಗಿವೆ. ಸಿಸಿ ಕ್ಯಾಮೆರಾ ಹಾಗೂ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಕಾಣಿಕೆ ಎಣಿಕೆ ಕಾರ್ಯ ನಡೆದಿದೆ.
ಕಾಣಿಕೆ ಎಣಿಕೆ ವೇಳೆ ನೇಪಾಳ ದೇಶದ ಎರಡು ವಿದೇಶಿ ನೋಟುಗಳು, 3 ವಿದೇಶಿ ನಾಣ್ಯಗಳು ದೊರೆತಿವೆ. ಅಂಜನಾದ್ರಿ ಬೆಟ್ಟದ ಆಂಜನೇಯ ಸ್ವಾಮಿಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿದ್ದು, ಭರ್ಜರಿ ಕಾಣಿಕೆ ಸಂಗ್ರಹವಾಗಿದೆ.