ಬಾಗಲಕೋಟೆ: ಮನೆಯೊಂದರಲ್ಲಿ ಕಳೆದ 27 ದಿನಗಳ ಹಿಂದೆ ಹಚ್ಚಿದ್ದ ದೀಪವೊಂದು ಇನ್ನೂ ಉರಿಯುತ್ತಲೇ ಇದ್ದು, ದೇವರ ಪವಾಡವೆಂದು ಜನರು ಭಕ್ತಿಯ ಪರಾಕಾಷ್ಠೆ ಮೆರೆಯುತ್ತಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಗಲಗಲಿಯ ಬೌರವ್ವ ಕತ್ತಿ ಮನೆಯಲ್ಲಿ ಈ ಘಟನೆ ನಡೆದಿದೆ. ಬೌರವ್ವ ಎಂಬ ಮಹಿಳೆ ಏಪ್ರಿಲ್ 1ರಂದು ಮನೆಯಲ್ಲಿ ದೇವರ ಮುಂದೆ ದೀಪ ಹಚ್ಚಿ ಮಗಳ ಮನೆಗೆ ತೆರಳಿದ್ದರು. 27 ದಿನಗಳ ಬಳಿಕ ವಾಪಸ್ ಆಗಿದ್ದರು. ಮನೆ ಬಾಗಿಲು ತೆರೆದು ನೋಡಿದಾಗ ಕಳೆದ 27 ದಿನಗಳ ಹಿಂದೆ ತಾನು ದೇವರ ಮುಂದೆ ಹಚ್ಚಿರುವ ದೀಪ ಹಾಗೇ ಉರಿಯುತ್ತಿರುವುದು ಕಂಡು ಅಚ್ಚರಿಗೊಂಡಿದ್ದಾರೆ.
‘ಹುಲಿಯ ಹಾಲಿನ ಮೇವು’, ‘ಬಬ್ರುವಾಹನ’ ನಿರ್ಮಾಪಕ ಕೆಸಿಎನ್ ಚಂದ್ರಶೇಖರ್ ವಿಧಿವಶ
ಕ್ಷಣ ಮಾತ್ರದಲ್ಲಿ ಗ್ರಾಮದ ಜನರಿಗೆ ಈ ಅಚ್ಚರಿ ವಿಚಾರ ತಿಳಿದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಜನರು ಬೌರವ್ವ ಮನೆಗೆ ಆಗಮಿಸುತ್ತಿದ್ದು, ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ಪವಾಡವೆಂದು ಭಕ್ತಿಯಿಂದ ಪೂಜೆ ಪುನಸ್ಕಾರಗಳಲ್ಲಿ ತೊಡಗಿದ್ದಾರೆ.