ದೇಶದಲ್ಲಿ ಇದುವರೆಗೂ ಒಮಿಕ್ರಾನ್‌ನ 26 ಕೇಸುಗಳು ಪತ್ತೆಯಾಗಿವೆ ಎಂದಿರುವ ಸರ್ಕಾರ, ಬಹುತೇಕ ಎಲ್ಲಾ ಪ್ರಕರಣಗಳಲ್ಲೂ ಲಘುವಾದ ರೋಗಲಕ್ಷಣಗಳು ಮಾತ್ರವೇ ಕಾಣಿಸಿಕೊಂಡಿವೆ ಎಂದಿದೆ. ವೈದ್ಯಕೀಯವಾಗಿ ಒಮಿಕ್ರಾನ್‌ನಿಂದ ಹೆಚ್ಚುವರಿ ಹೊರೆ ಇದುವರೆಗೆ ಆಗದೇ ಇದ್ದರೂ ಸಹ ಎಲ್ಲೆಡೆ ಕಟ್ಟೆಚ್ಚರ ವಹಿಸುವುದು ಅತ್ಯಗತ್ಯ ಎಂದು ಭಾರತೀಯ ಮದ್ದು ಪ್ರಾಧಿಕಾರ ತಿಳಿಸಿದೆ.
ಮಹಾರಾಷ್ಟ್ರದಲ್ಲಿ ಒಮಿಕ್ರಾನ್‌ನ 10 ಪ್ರಕರಣಗಳು, ರಾಜಸ್ಥಾನದಲ್ಲಿ 9, ಗುಜರಾತ್‌ನಲ್ಲಿ ಮೂರು, ಕರ್ನಾಟಕದಲ್ಲಿ ಎರಡು ಹಾಗೂ ದೆಹಲಿಯಲ್ಲಿ ಒಂದು ಪ್ರಕರಣಗಳು ದಾಖಲಾಗಿವೆ ಎಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಗಿದೆ.
ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಶಾಕ್
ಈ ವಿಚಾರವಾಗಿ ಮಾತನಾಡಿದ ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ವಿಕೆ ಪೌಲ್, “ರಕ್ಷಣೆಯ ವಿಚಾರಕ್ಕೆ ಬರೋದಾದರೆ, ನಾವು ರಿಸ್ಕಿಯಾಗಿ ಬಾಳು ಮಾಡುತ್ತಿದ್ದೇವೆ. ಮಾಸ್ಕ್ ಧಾರಣೆ ಕಡಿಮೆಯಾಗುತ್ತಿದೆ. ಲಸಿಕೆಗಳು ಹಾಗೂ ಮಾಸ್ಕ್‌ಗಳು ಬಹಳ ಮುಖ್ಯವೆಂದು ನಾವು ನೆನಪಿಟ್ಟುಕೊಳ್ಳಬೇಕು. ನಾವು ಜಾಗತಿಕ ಪರಿಸ್ಥಿತಿಯಿಂದ ಕಲಿಯಬೇಕಿದೆ,” ಎಂದಿದ್ದಾರೆ.