ಆರಂಭದಲ್ಲಿ ಜನಸಾಮಾನ್ಯರಿಗೆ ಮೊಬೈಲ್ ಪರಿಚಯಿಸಿದ್ದೇ ನೋಕಿಯಾ ಕಂಪನಿ. ಮೊಬೈಲ್ ಅಂದ್ರೇನೇ ನೋಕಿಯಾ ಎಂಬಂತಾಗಿತ್ತು. ಆದ್ರೆ ಸ್ಮಾರ್ಟ್ ಫೋನ್ ಬಂದ್ಮೇಲೆ ಬೇಸಿಕ್ ಫೋನ್‌ಗಳಿಗೆ ಬೇಡಿಕೆ ಕುಸಿದು ಹೋಯ್ತು.
ನೋಕಿಯಾ ಕೂಡ ಕಣ್ಮರೆಯಾಯ್ತು. ಒಂದು ಕಾಲದಲ್ಲಿ ಮೊಬೈಲ್ ಜಗತ್ತನ್ನೇ ಆಳಿದ್ದ ನೋಕಿಯಾ ಕಂಪನಿ ತನ್ನ ಜನಪ್ರಿಯತೆಯನ್ನು ಕಳೆದುಕೊಂಡ್ತು. ಕ್ರಮೇಣ ಜನರು ಫೀಚರ್ ಫೋನ್‌ಗಳಿಂದ ಸ್ಮಾರ್ಟ್‌ಫೋನ್‌ಗಳತ್ತ ಮುಖ ಮಾಡಿದ್ರು. ಆದ್ರೆ Nokia ಬೇಸಿಕ್ ಫೋನ್‌ಗಳು ಈಗಲೂ ಇವೆ.
26 ವರ್ಷಗಳ ಹಿಂದೆ Nokia 8110 ಫೋನ್ ಬಿಡುಗಡೆಯಾಗಿತ್ತು. 1996 ರಲ್ಲಿ ಲಾಂಚ್ ಆಗಿದ್ದು ಸ್ಲೈಡರ್ ಫೋನ್. ಆ ಸಮಯದಲ್ಲಿ ಈ ಫೋನ್ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತ್ತು. ಇದನ್ನು ಬನಾನಾ ಫೋನ್ ಎಂದೂ ಕರೆಯಲಾಗುತ್ತಿತ್ತು. ಮುಚ್ಚಿರುವ ಕೀಪ್ಯಾಡ್, ವಿಶಿಷ್ಟ ಲುಕ್ ನೋಡಿ ಜನರು ಅದನ್ನು ಇಷ್ಟಪಟ್ಟಿದ್ದರು. ಹಾಲಿವುಡ್ ಚಲನಚಿತ್ರ ʼಮ್ಯಾಟ್ರಿಕ್ಸ್ʼನಲ್ಲಿ ನೋಕಿಯಾದ ಈ ಫೋನ್ ಕಾಣಿಸಿಕೊಳ್ತಿದ್ದಂತೆ ಅದನ್ನು ಕೊಳ್ಳಲು ಜನರು ಪೈಪೋಟಿಗೆ ಬಿದ್ದಿದ್ದರು.
ಈ ಫೋನ್‌ನ ಉತ್ಪಾದನೆ ಸ್ಥಗಿತಗೊಂಡು ವರ್ಷಗಳೇ ಕಳೆದಿವೆ. ಆದರೆ ಈ ಅಪರೂಪದ ಫೋನ್ ಇರುವವರು ಅದನ್ನು ಭಾರೀ ಮೊತ್ತಕ್ಕೆ ಮಾರಾಟ ಮಾಡ್ತಿದ್ದಾರೆ. ಅಮೆರಿಕದಲ್ಲಿ eBayಯಲ್ಲಿ ಈ ಫೋನ್ ಮಾರಾಟಕ್ಕಿದೆ. ಇಬೇ ಮೂಲಕ ಆಸಕ್ತರು Nokia 8110 ಅನ್ನು ಸುಮಾರು 40 ಸಾವಿರ ರೂಪಾಯಿ ಕೊಟ್ಟು ಖರೀದಿಸಬಹುದು.
ಸೆಕೆಂಡ್ ಹ್ಯಾಂಡ್ ಫೋನ್ 55-200 ಡಾಲರ್ ಅಂದ್ರೆ ಸುಮಾರು 4,280 ರೂಪಾಯಿಯಿಂದ 15,600 ರೂಪಾಯಿಗೆ ಮಾರಾಟವಾಗುತ್ತಿದೆ. ಇಬೇ, ಈ ಫೋನ್ ಅನ್ನು ಅಮೆರಿಕದಲ್ಲಿ ಮಾತ್ರ ವಿತರಿಸುತ್ತಿದೆ.