ಅಸಹಾಯಕರಿಗೆ ದಾನ ಮಾಡುವುದೇ ಮನುಷ್ಯನ ಮೂಲ ಧರ್ಮ. ಆದರೆ ಕೆಲ ಸ್ವಾರ್ಥಿಗಳು ದಾನ ಮಾಡುವುದಿರಲಿ, ಬೇರೆಯವರಿಗೆ ಸಹಾಯ ಮಾಡುವುದಕ್ಕೂ ಲೆಕ್ಕಾಚಾರ ಹಾಕಿರ್ತಾರೆ, ಆದರೆ ಇಲ್ಲೊಬ್ಬ ಯುವಕ ಬುದ್ಧಿಮಾಂದ್ಯದಿಂದ ಬಳಲುವವರಿಗೆ ಮಾಡಿದ ಕೆಲಸ ಸಮಾಜಕ್ಕೆ ಮಾದರಿಯಾಗಿದೆ.
ಜಾಕ್ಸನ್ ಇಟಾಲಿಯನ್, ಆಸ್ಟ್ರೇಲಿಯಾದ ಈ ಯುವಕನಿಗೆ ಫಿಟ್‌ನೆಸ್ ಅಂದರೆ ಒಂದು ರೀತಿ ಹುಚ್ಚು. ಈಗ ಅನೇಕ ಗಂಟೆಗಳ ಕಾಲ ವಿಶ್ರಾಂತಿಯೇ ಇಲ್ಲದೇ ವರ್ಕೌಟ್ ಮಾಡಿದ್ದು ಸುಮಾರು 8008 ಪುಲ್-ಅಪ್ ಗಳನ್ನ ಮಾಡಿದ್ದಾನೆ. ಅದು ಕೇವಲ 24 ಗಂಟೆಗಳಲ್ಲಿ ಮಾತ್ರ. ಅಷ್ಟಕ್ಕೂ ಇಷ್ಟು ಪುಲ್-ಅಪ್‌ಗಳನ್ನ ಮಾಡಿದಾದರೂ ಏಕೆ ಗೊತ್ತಾ? ಸುಮಾರು 4 ಲಕ್ಷಕ್ಕೂ ಹೆಚ್ಚು ಬುದ್ಧಿಮಾಂದ್ಯದವರಿಗೆ ಸಹಾಯ ಮಾಡಲೆಂದೇ ನಿಧಿ ಸಂಗ್ರಹ ಮಾಡಿದ್ದಾರೆ.
ಕಳೆದ ನವೆಂಬರ್ 15ರಲ್ಲೂ ನ್ಯೂ ಸೌತ್ ವೇಲ್ಸ್‌ನ ಸಿಡ್ನಿಯಲ್ಲಿ ಜಾಕ್ಸನ್ ಇದೇ ರೀತಿ ಫುಲ್ಅಪ್ ಗಳನ್ನ ಮಾಡಿದರು. ಆದರೆ ಅದು ಕೇವಲ ಮೂರು ಗಂಟೆ ಅವಧಿಯವರೆಗೆ ಮಾತ್ರ ಆಗಿತ್ತು, ಆದರೆ ಈ ಬಾರಿ 24 ಗಂಟೆಗಳ ಕಾಲ ಪುಲ್-ಅಪ್ ಮಾಡಿ ದಾಖಲೆಯನ್ನೇ ಮಾಡಿದ್ದಾರೆ.
ಜಾಕ್ಸನ್, ಒಂದು ಸದುದ್ದೇಶ ಇಟ್ಟುಕೊಂಡು ಮಾಡಿದ ಕೆಲಸ ಇದಾಗಿತ್ತು. ಅದರಿಂದ ಮೊದಲೇ ಅನೇಕರಿಗೆ ಈ ವಿಚಾರವನ್ನು ಹೇಳಿದರು. ಅಷ್ಟೆ ಅಲ್ಲ ತಾವು ಮಾಡುತ್ತಿರುವ ಈ ಒಂದೊಂದು ಪುಲ್-ಅಪ್ ಕಸರತ್ತಿಗೆ 0.66 ಡಾಲರ್ ಸಂಗ್ರಹಿಸಿದರು. ಆಶ್ಚರ್ಯ ಏನಂದ್ರೆ, ಇವರು ಮಾಡಿದ 8,008 ಪುಲ್-ಅಪ್ ನಿಂದಾಗಿ ಸುಮಾರು 5,914.72 ಡಾಲರ್ ಸಂಗ್ರಹ ಮಾಡಲಾಗಿತ್ತು.
ಈ ಒಂದು ದಾಖಲೆಯ ಪುಲ್‌ಅಪ್‌ಗಾಗಿ ಇವರು 8 ತಿಂಗಳ ಕಾಲ ತರಬೇತಿ ಪಡೆದಿದ್ದಾರೆ, ಈ ತರಬೇತಿ ನಂತರ ಜಾಕ್ಸನ್ ‘ನಾನು ನಿರ್ವಹಿಸುವ ಪ್ರತಿಯೊಂದು ಪುಲ್-ಅಪ್‌ಗೆ ಒಂದೊಂದು ಡಾಲರ್ ಸಂಗ್ರಹಿಸುವ ಗುರಿಯನ್ನು ಹೊಂದಿದ್ದೇನೆ. ಆದ್ದರಿಂದ ನಿಮ್ಮ ಕೈಲಾದ ದೇಣಿಗೆ ನೀಡಿ, ನಿಮ್ಮ ಈ ಸಹಾಯದಿಂದ ಬುದ್ಧಿಮಾಂದ್ಯತೆ ಇರುವವರಿಗೆ ಸಹಾಯವಾಗುತ್ತೆ. ದಯವಿಟ್ಟು ಸಹಾಯ ಮಾಡಿ’ ಎಂದು ಹೇಳಿದರು.
ಈಗಾಗಲೇ ಸಂಗ್ರಹವಾದ ಹಣ ಸಂಸ್ಥೆಗೆ ಸೇರಿದ್ದಾಗಿದೆ. ಈ ಹಣದಿಂದ ಬುದ್ಧಿಮಾಂದ್ಯ ಮಕ್ಕಳಿಗೆ ಬೇಕಾಗಿರುವ ಸಹಾಯ ಮಾಡಲಾಗುತ್ತೆ. ಆಸ್ಟ್ರೇಲಿಯಾ ಸರ್ಕಾರ ಕೂಡ ಜಾಕ್ಸನ್ ಮಾಡಿರುವ ಕೆಲಸ ನೋಡಿ ಮೆಚ್ಚುಗೆಯನ್ನ ಸೂಚಿಸಿದೆ.