ಈಗ ಚಾಟ್ಜಿಪಿಟಿ ಜನಪ್ರಿಯತೆಯು ಇಡೀ ಜಗತ್ತನ್ನು ಅಚ್ಚರಿಗೊಳಿಸಿದೆ. ವಿದ್ಯಾರ್ಥಿಗಳಿಂದ ಕಂಪೆನಿಗಳವರೆಗೆ, ಪ್ರತಿಯೊಬ್ಬರೂ ತಮ್ಮ ಕೆಲಸವನ್ನು ಸುಲಭಗೊಳಿಸಲು ಈ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದಾರೆ. ಆದರೆ, ಅದನ್ನು ಹೇಗೆ ಬಳಸಬೇಕೆಂದು ಜನರಿಗೆ ಕಲಿಸುವ ಮೂಲಕ ನೀವು ಹಣವನ್ನು ಗಳಿಸಬಹುದು ಎಂದು ನೀವು ಊಹಿಸಬಲ್ಲಿರಾ?
ಇದು ಶುರುವಾದಾಗ ಹಲವಾರು ಮಂದಿಯ ಉದ್ಯೋಗಕ್ಕೆ ಧಕ್ಕೆ ಬರುತ್ತದೆ ಎನ್ನಲಾಗುತ್ತಿತ್ತು. ಆದರೆ ಅಸಲಿಗೆ ಇದೇ ಉದ್ಯೋಗ ನೀಡುತ್ತಿದೆ. ಬ್ಯುಸಿನೆಸ್ ಇನ್ಸೈಡರ್ ವರದಿಯ ಪ್ರಕಾರ, ಲ್ಯಾನ್ಸ್ ಜಂಕ್ ಎಂಬ 23 ವರ್ಷದ ವ್ಯಕ್ತಿ ಶಿಕ್ಷಣ ವೇದಿಕೆಯಲ್ಲಿ ಆನ್‌ಲೈನ್ ಕೋರ್ಸ್ ಅನ್ನು ಪ್ರಾರಂಭಿಸಿದ್ದಾರೆ.
ಕೇವಲ ಮೂರು ತಿಂಗಳುಗಳಲ್ಲಿ, ಜಂಕ್ ತನ್ನ ChatGPT ಮಾಸ್ಟರ್ ಕ್ಲಾಸ್‌ಗಾಗಿ ಪ್ರಪಂಚದಾದ್ಯಂತದ 15 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾನೆ. ಸಂಪೂರ್ಣ ಮಾರ್ಗದರ್ಶನಕ್ಕೆ ಆತ ಕಳೆದ ಮೂರು ತಿಂಗಳಿನಲ್ಲಿ ಗಳಿಸಿರುವುದು $35,000 (ಸುಮಾರು ರೂ. 28.4 ಲಕ್ಷ). ಚಾಟ್‌ಜಿಪಿಟಿಯನ್ನು ಹೇಗೆ ಬಳಸುವುದು ಎಂದು ಜನರಿಗೆ ಕಲಿಸಲು ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ.
“ಜನರು ChatGPT ಬಗ್ಗೆ ಭಯಪಡುತ್ತಾರೆ ಎಂದು ನಾನು ಭಾವಿಸುತ್ತೇನೆ, ಆದ್ದರಿಂದ ನಾನು ಅದನ್ನು ಹೋಗಲಾಡಿಸಲು ಈ ಪ್ರಯತ್ನ ಮಾಡುತ್ತಿದ್ದೇನೆ ಎಂದಿದ್ದಾರೆ.