ಮ್ಯಾಂಚೆಸ್ಟರ್ನ 22 ವರ್ಷದ ವಿದ್ಯಾರ್ಥಿನಿ ಲಾರಾ ತನ್ನ ಕನ್ಯತ್ವವನ್ನ ಆನ್ಲೈನ್ ಹರಾಜಿನಲ್ಲಿ 18 ಕೋಟಿಗೆ ಮಾರಾಟ ಮಾಡಿದ್ದಾರೆ. ಹಾಲಿವುಡ್ ನಟರೊಬ್ಬರು ಈ ಹರಾಜಿನಲ್ಲಿ ಗೆದ್ದಿದ್ದಾರೆ.
ಲಾರಾ ತನ್ನ ಕನ್ಯತ್ವವನ್ನ ಹರಾಜು ಹಾಕುವ ಮೂಲಕ ಜಗತ್ತಿನಾದ್ಯಂತ ಸುದ್ದಿಯಾಗಿದ್ದಾರೆ. ಆನ್ಲೈನ್ನಲ್ಲಿ ನಡೆದ ಹರಾಜಿನಲ್ಲಿ ರಾಜಕಾರಣಿಗಳು, ಉದ್ಯಮಿಗಳು, ಸೆಲೆಬ್ರಿಟಿಗಳು ಸೇರಿದಂತೆ ಹಲವರು ಭಾಗವಹಿಸಿದ್ದರು. ಕೊನೆಗೆ ಹಾಲಿವುಡ್ ನಟರೊಬ್ಬರು 18 ಕೋಟಿ ಬಿಡ್ ಮಾಡಿ ಗೆದ್ದಿದ್ದಾರೆ.
ಧಾರ್ಮಿಕ ಹಿನ್ನೆಲೆ ಹೊಂದಿದ್ದರೂ, ಲಾರಾ ತನ್ನ ನಿರ್ಧಾರದ ಬಗ್ಗೆ ಯಾವುದೇ ವಿಷಾದ ವ್ಯಕ್ತಪಡಿಸಿಲ್ಲ. ಹಣಕಾಸಿನ ಭದ್ರತೆಗಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ. ಹಲವು ಹುಡುಗಿಯರು ಯಾವುದೇ ಲಾಭವಿಲ್ಲದೆ ಕನ್ಯತ್ವ ಕಳೆದುಕೊಳ್ಳುತ್ತಾರೆ. ಆದರೆ ನಾನು ಭವಿಷ್ಯವನ್ನು ಭದ್ರಪಡಿಸಿಕೊಂಡಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಹರಾಜಿನಲ್ಲಿ ಭಾಗವಹಿಸುವ ಮುನ್ನ ಲಾರಾ ಸಂಭಾವ್ಯ ಬಿಡ್ ದಾರರನ್ನು ಭೇಟಿಯಾಗಲು ವಿಶೇಷ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಒಪ್ಪಂದ ಅಂತಿಮಗೊಳಿಸಿದ ನಂತರ, ಕನ್ಯತ್ವವನ್ನು ಖಚಿತಪಡಿಸಿಕೊಳ್ಳಲು ಖರೀದಿದಾರರ ಸಮ್ಮುಖದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದಾರೆ. ಎಲ್ಲಾ ಪಕ್ಷಗಳ ಗುರುತನ್ನು ರಕ್ಷಿಸಲು ಈ ಪ್ರಕ್ರಿಯೆಯನ್ನು ಗೌಪ್ಯವಾಗಿ ನಿರ್ವಹಿಸಲಾಗಿದೆ.
ಹಾಲಿವುಡ್ ನಟನಿಗೆ ಕನ್ಯತ್ವ ಮಾರಾಟ ಮಾಡಿದ ನಂತರ ಲಾರಾ ವಿವಾದಾತ್ಮಕ ನಿರ್ಧಾರದ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಹಲವರು ಅರ್ಥಪೂರ್ಣ ಮೊದಲ ಬಾರಿಯ ಅನುಭವವನ್ನು ಬಯಸುತ್ತಾರೆ. ಆದರೆ ಲಾರಾ ಹಣಕಾಸಿನ ಲಾಭವನ್ನು ಪಡೆಯಲು ಅವಕಾಶವನ್ನು ನೋಡಿದ್ದಾರೆ.
ಲಾರಾ “ನಾನು ತರ್ಕಬದ್ಧ ವ್ಯಕ್ತಿ. ನನ್ನ ನಿರ್ಧಾರದ ಬಗ್ಗೆ ನನಗೆ ಯಾವುದೇ ವಿಷಾದವಿಲ್ಲ” ಎಂದು ಹೇಳಿದ್ದಾರೆ. ಶ್ರೀಮಂತ ನಟನೊಂದಿಗೆ ರಾತ್ರಿ ಕಳೆದ ನಂತರ ಲಾರಾ ಮತ್ತೊಂದು ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಯೋಜಿಸಿದ್ದಾರೆ. ತನ್ನ ಸಹವಾಸಕ್ಕಾಗಿ ತಿಂಗಳಿಗೆ 30,000 ಪೌಂಡ್ ಪಾವತಿಸಲು ಸಿದ್ಧರಿರುವ ಶ್ರೀಮಂತ ದಾನಿಗಳನ್ನು ಹುಡುಕುತ್ತಿದ್ದಾರೆ.