22/02/2022 ಈ ದಿನಾಂಕ ಸಖತ್ ಪೇಮಸ್ ಆಗಿದೆ. ವಿಶ್ವದ ಬಹುತೇಕ ಮಂದಿ ಈ ದಿನಾಂಕದ ಬಗ್ಗೆ ತಮ್ಮ ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ದಿನಾಂಕ ಯಾಕಿಷ್ಟು ಸ್ಪೆಷಲ್ ಎಂದರೆ, ಇದನ್ನು ಬ್ರಿಟಿಷ್ ಅಥವಾ ನಾವು ಬಳಸುವ ಫಾರ್ಮಾಟ್ ನಲ್ಲಿ ಬರೆದಾಗ, ಮೇಲಿನಿಂದ ಅಥವಾ ತಲೆಕೆಳಗಾಗಿ, ಎಡದಿಂದ ಅಥವಾ ಬಲಕ್ಕೆ ಯಾವ ಬದಿಯಿಂದ ನೋಡಿದರು ಒಂದೇ ರೀತಿ ತೋರಿಸುತ್ತದೆ.
ಇಂಗ್ಲೀಷ್‌ನಲ್ಲಿ ಟ್ಯುಸ್‌ಡೇ ಎಂದು ಕರೆಯುವ ಮಂಗಳವಾರದಂದೇ ಈ ದಿನಾಂಕವೂ ಬಂದಿದ್ದು, ಜನ ಇದನ್ನು ಟೂಸ್ ಡೇ ಎಂದೆಲ್ಲಾ ಕರೆದಿದ್ದರು. ಆದರೆ ಇದಕ್ಕಿಂತ ವಿಶೇಷ ಸಂಗತಿ ಎಂದರೆ ಅಂದು ಜನನವಾದ ಮಗು. ಸಧ್ಯ ಮಿರಾಕಲ್ ಬೇಬಿ ಎಂದು ಕರೆಸಿಕೊಳ್ಳತ್ತಿರುವ ಮಗುವೊಂದು 22/2/2022 ರಂದು ಸರಿಯಾಗಿ ಮಧ್ಯರಾತ್ರಿ 2:22 ರ ಸಮಯದಲ್ಲಿ ಜನಿಸಿದೆ. ಈ ಮಗು ಜನಿಸಿದ ಕೋಣೆ ಸಂಖ್ಯೆ ಕೂಡ 2. ಈ ಮಗುವಿನ ಹುಟ್ಟಿದ ಸಮಯ ಹುಟ್ಟಿದ ದಿನ ಎಲ್ಲವೂ ಎರಡು ಆಗಿದ್ದು, ಅಚ್ಚರಿಗೆ ಕಾರಣವಾಗಿದೆ.
ಅಬೆರ್ಲಿ ಮತ್ತು ಹ್ಯಾಂಕ್ ಸ್ಪಿಯರ್ ಎಂಬ ದಂಪತಿ ಈ ಮಗುವಿನ ಹೆತ್ತವರು. ಅವರು ಈಕೆಗೆ ಜುದಾ ಎಂದು ಹೆಸರಿಸಿದ್ದಾರೆ. ನಾರ್ತ್ ಕೆರೊಲಿನಾದ ಆಸ್ಪತ್ರೆಯಲ್ಲಿ ಮಗು ಜುದಾ ಜನಿಸಿದ್ದಾಳೆ. ಈ ಸಮಯದಲ್ಲಿ ಮಗು ಜನಿಸಿದ ಸುದ್ದಿ ಆಸ್ಪತ್ರೆಯ ಸಾಮಾಜಿಕ ಮಾಧ್ಯಮವಾದ ಕೋನ್ ಹೆಲ್ತ್ ಮೂಲಕ ರಾಜ್ಯಾದ್ಯಂತ ವೈರಲ್ ಆಗಿದೆ. ಉತ್ತರ ಕೆರೊಲಿನಾದ ಬರ್ಲಿಂಗ್ಟನ್‌ನಲ್ಲಿರುವ ಅಲಮಾನ್ಸ್ ಪ್ರಾದೇಶಿಕ ವೈದ್ಯಕೀಯ ಕೇಂದ್ರದಲ್ಲಿ ಮಗು ಜನಿಸಿದೆ ಎಂದು ಪೋಸ್ಟ್ ನಿಂದ ತಿಳಿದು ಬಂದಿದೆ.
ನವಜಾತ ಶಿಶು ಜುದಾ ಗ್ರೇಸ್ ಸ್ಪಿಯರ್, ಅವರ ತಾಯಿ ಕ್ಯಾನ್ಸರ್ ವಿರುದ್ಧ ಹೋರಾಡಿ ಬದುಕಿದವರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಲಾಗಿದೆ. ಜುದಾ ತಾಯಿ ಅಬೆರ್ಲಿ ಕ್ಯಾನ್ಸರ್ ಕಾಯಿಲೆ ಲಿಂಫೋಮಾದಿಂದ ಬದುಕುಳಿದಿದ್ದರು. ಆಕೆಯ ಚಿಕಿತ್ಸೆಗಳಿಂದ ಗರ್ಭವನ್ನು ಉಳಿಸಿಕೊಳ್ಳುವುದೇ ಕಷ್ಟವಾಗಿತ್ತು. ಆದರೆ ಇಡೀ ಕುಟುಂಬ ತಾಯಿ-ಮಗು ಇಬ್ಬರ ಉಳಿವಿಗಾಗಿ ನಿರಂತರ ಪ್ರಾರ್ಥನೆ ಮಾಡಿತ್ತು. ಈಗ ಅವರ ಪ್ರಾರ್ಥನೆಯ ಫಲ ಸಿಕ್ಕಿದೆ. ಇಷ್ಟೆಲ್ಲಾ ಕಷ್ಟಗಳು ನಡುವೆ ವಿಶೇಷ ಗಳಿಗೆಯಲ್ಲಿ ಭೂಮಿಗೆ ಇಳಿದಿರುವ ಜುದಾ, ಮಿರಾಕಲ್ ಬೇಬಿ ಎಂದೇ ವಿಶ್ವಕ್ಕೆ ಪರಿಚಿತಳಾಗಿದ್ದಾಳೆ.