ಟಿ-20 ಕ್ರಿಕೆಟ್ ಇತ್ತೀಚೆಗೆ ಸಾಕಷ್ಟು ಜನಪ್ರಿಯವಾಗಿದೆ. ಚುಟುಕು ಕ್ರಿಕೆಟ್ ಪಂದ್ಯಗಳಲ್ಲಿ ಸಾಮಾನ್ಯವಾಗಿ ಬ್ಯಾಟ್ಸ್‌ಮನ್‌ಗಳ ಪ್ರಾಬಲ್ಯವಿರುತ್ತದೆ. ಹೆಚ್ಹೆಚ್ಚು ಬೌಂಡರಿ ಹಾಗೂ ಸಿಕ್ಸರ್ ಬಾರಿಸಿದ್ರೆ ಪ್ರೇಕ್ಷಕರು ಥ್ರಿಲ್ ಆಗ್ತಾರೆ. ವೆಸ್ಟ್ ಇಂಡೀಸ್‌ನ ಆಲ್ ರೌಂಡರ್ ರಹಕೀಮ್ ಕಾರ್ನ್ ವಾಲ್ ಅಮೆರಿಕದಲ್ಲಿ ನಡೆದ ಟಿ-20 ಟೂರ್ನಿಯಲ್ಲಿ ಪ್ರೇಕ್ಷಕರಿಗೆ ರನ್‌ಗಳ ರಸದೌತಣವನ್ನೇ ಉಣಬಡಿಸಿದ್ದಾರೆ. ಭರ್ಜರಿ ದ್ವಿಶತಕ ಬಾರಿಸಿ ಇತಿಹಾಸ ಸೃಷ್ಟಿಸಿದ್ದಾರೆ.
ಕೇವಲ 77 ಎಸೆತಗಳಲ್ಲಿ ಕಾರ್ನ್‌ವಾಲ್ ಡಬಲ್ ಸೆಂಚುರಿ ಸಿಡಿಸಿದ್ದು ವಿಶೇಷ. ಇದರಲ್ಲಿ ಬರೋಬ್ಬರಿ 22 ಸಿಕ್ಸರ್ ಮತ್ತು 17 ಬೌಂಡರಿಗಳಿತ್ತು. 205 ರನ್ ಗಳಿಸಿದ ಕಾರ್ನ್‌ವಾಲ್ ನಾಟೌಟ್ ಆಗಿಯೇ ಉಳಿದರು. ಅಟ್ಲಾಂಟಾ ಓಪನ್ T20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಅಟ್ಲಾಂಟಾ ಫೈರ್ ತಂಡದ ಪರವಾಗಿ ಅವರು ಆಡುತ್ತಿದ್ದಾರೆ. ಕಾರ್ನ್‌ವಾಲ್ ತನ್ನ ದ್ವಿಶತಕದ ನೆರವಿನಿಂದ ಅಟ್ಲಾಂಟಾ ಫೈರ್ ತಂಡ 172 ರನ್ ಗಳ ಗೆಲುವು ಸಾಧಿಸಿದೆ.
ಕಾರ್ನ್‌ವಾಲ್ 266.23 ಸ್ಟ್ರೈಕ್ ರೇಟ್ ಗಳಿಸಿದ್ದಾರೆ. ಈ ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ 75,000 ಡಾಲರ್ ಬಹುಮಾನ ಲಭ್ಯವಿದೆ. ಇದು ಅಟ್ಲಾಂಟಾ ಓಪನ್ ಎಂದು ಕರೆಯಲ್ಪಡುವ ಅಮೆರಿಕದ T20 ಸ್ಪರ್ಧೆಯಾಗಿದೆ. ರಹಕೀಮ್ ಕಾರ್ನ್‌ವಾಲ್, ತಾನು 360 ಡಿಗ್ರಿ ಆಟಗಾರ ಎಂದು ಹೇಳಿಕೊಂಡಿದ್ದರು. ಅದೇ ರೀತಿ ಬ್ಯಾಟಿಂಗ್ ಕೂಡ ಮಾಡಿದ್ದಾರೆ. ಇಲ್ಲಿಯವರೆಗೆ 66 ಟಿ20 ಪಂದ್ಯಗಳನ್ನು ಆಡಿದ್ದು, 1146 ರನ್ ಗಳಿಸಿದ್ದಾರೆ.