alex Certify ದತ್ತು‌ ಪಡೆದ ಪೋಷಕರನ್ನೇ ಬರ್ಬರವಾಗಿ ಇರಿದು ಕೊಂದ ಉಕ್ರೇನ್ ಯುವಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದತ್ತು‌ ಪಡೆದ ಪೋಷಕರನ್ನೇ ಬರ್ಬರವಾಗಿ ಇರಿದು ಕೊಂದ ಉಕ್ರೇನ್ ಯುವಕ

ಫ್ಲೋರಿಡಾ: ಯುವಕನೊಬ್ಬ ತನ್ನ ದತ್ತು ಪೋಷಕರನ್ನು ಬರ್ಬರವಾಗಿ ಹತ್ಯೆಗೈದ ಭೀಬತ್ಸ ಘಟನೆ ಅಮೆರಿಕದಲ್ಲಿ ನಡೆದಿದೆ. ಏಳು ವರ್ಷಗಳ ಹಿಂದೆ ಉಕ್ರೇನಿಯನ್ ಅನಾಥ ಹುಡುಗನನ್ನು ಅಮೆರಿಕದ ದಂಪತಿ ದತ್ತು ಪಡೆದಿದ್ರು. ಅವರನ್ನು ಭೀಕರವಾಗಿ ಇರಿದು ಕೊಂದಿದ್ದಾನೆ.

ಆರೋಪಿ 21 ವರ್ಷದ ಡಿಮಾ ಎಂಬಾತ ಫ್ಲೋರಿಡಾದ ನಾರ್ತ್ ಪೋರ್ಟ್‌ನಲ್ಲಿರುವ ಮನೆಯಲ್ಲಿ ತನ್ನ ದತ್ತು ಪಡೆದ ಪೋಷಕರಿಗೆ ಇರಿದು ಎಸ್ಕೇಪ್ ಆಗಿದ್ದಾನೆ. ತಲೆಮರೆಸಿಕೊಂಡಿದ್ದ ಆರೋಪಿಯನ್ನು ಘಟನೆ ನಡೆದ ಎಂಟು ಗಂಟೆಯಲ್ಲಿ ಪೊಲೀಸರು ಸೆರೆಹಿಡಿದಿದ್ದಾರೆ.

ರಿಯಲ್ ಎಸ್ಟೇಟ್ ಏಜೆಂಟ್‌ಗಳಾಗಿಯೂ ಕೆಲಸ ಮಾಡುತ್ತಿದ್ದ ಕ್ರಿಶ್ಚಿಯನ್ ಮಿಷನರಿ ದಂಪತಿಗಳು, ತಮ್ಮ ಮನೆಯ ಲಿವಿಂಗ್ ರೂಮ್ ನ ನೆಲದ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಯುವಕನನ್ನು ತಮ್ಮ ಸ್ವಂತ ಮಗನಂತೆ ದಂಪತಿ ಸಾಕಿದ್ದರು. ಆದರೆ, ಆತ ಅವರನ್ನು ಯಾಕೆ ಕೊಂದ ಎಂಬುದು ಅಚ್ಚರಿ ತಂದಿದೆ ಎಂದು ಮೃತರ ಕುಟುಂಬಸ್ಥರು ತಿಳಿಸಿದ್ದಾರೆ.

21 ವರ್ಷದ ಯುವಕ ತನ್ನ ದತ್ತು ಪಡೆದ ಪೋಷಕರನ್ನು ಹತ್ಯೆ ಮಾಡಿದ್ದೇಕೆ ?

ಡಿಮಾ ಬಾಲ್ಯದಲ್ಲೇ ತನ್ನ ತಾಯಿಯನ್ನು ಕಳೆದುಕೊಂಡಿದ್ದ. ಮದ್ಯ ವ್ಯಸನಿಯಾಗಿದ್ದ ತಂದೆ ತನ್ನ ಪುತ್ರನನ್ನು ತೊರೆದ. ಹೀಗಾಗಿ ಬಾಲಕ ಅನಾಥಾಶ್ರಮದಲ್ಲಿ ಬೆಳೆಯುವಂತಾಯ್ತು. ಹೀಗಾಗಿ ಏಳು ವರ್ಷಗಳ ಹಿಂದೆ ಆತನನ್ನು ಅಮೆರಿಕದ ದಂಪತಿ ದತ್ತು ಪಡೆದಿದ್ದರು.

ದಂಪತಿಗಳಾದ ಜೆನ್ನಿಫರ್ ಮತ್ತು ರಾಬಿ ಇಬ್ಬರೂ ಧಾರ್ಮಿಕ ಪ್ರಚಾರಕರಾಗಿದ್ದರು. ದಂಪತಿ ತಮ್ಮದೇ ಆದ ಮಗುವನ್ನು ಹೊಂದಲು ಸಾಧ್ಯವಾಗಲಿಲ್ಲವಾದ್ರಿಂದ ಉಕ್ರೇನ್ ಗೆ ಹೋಗಿದ್ದ ಅವರು ಡಿಮಾನನ್ನು ದತ್ತು ಪಡೆದ್ರು. ಅನಾಥಾಶ್ರಮದಲ್ಲಿ ಬೆಳೆದಿದ್ದ ಡಿಮಾಗೆ ಅಲ್ಲಿ ಸರಿಯಾಗಿ ತಿನ್ನಲು ಸಿಗುತ್ತಿರಲಿಲ್ಲ. ಆತನಿಗೆ ಏಟುಗಳು ಸಹ ಬಿದ್ದಿದ್ದವು. ಹೊಡೆದಾಟಗಳು ಸಾಮಾನ್ಯವಾಗಿದ್ದವು. ಅಂತಹ ಪರಿಸರದಲ್ಲೇ ಆತ ಬೆಳೆದಿದ್ದ.

ಇಂತಹ ಬಾಲಕನಿಗೆ ಪ್ರೀತಿ, ಕಾಳಜಿ ತೋರಿಸಿದ್ರೆ ಆತ ಸರಿದಾರಿಗೆ ಬಂದು ತನ್ನ ಹಿಂದಿನ ಆಘಾತವನ್ನು ಮರೆಯುತ್ತಾನೆ ಎಂದು ದಂಪತಿ ನಂಬಿದ್ದರು. ಆದರೆ ಫ್ಲೋರಿಡಾದಲ್ಲಿದ್ದಾಗ ಡಿಮಾ ತನ್ನ ಹೊಸ ಪರಿಸರಕ್ಕೆ ಒಗ್ಗಿಕೊಳ್ಳಲು ಕಷ್ಟವಾಯಿತು. ಶಾಲೆಯಲ್ಲಿ ತನ್ನ ಸಹಪಾಠಿಗಳೊಂದಿಗೆ ಜಗಳವಾಡುತ್ತಿದ್ದ. ಆತ ಬಾಕ್ಸಿಂಗ್ ನಲ್ಲಿ ಆಸಕ್ತಿ ಹೊಂದಿದ್ದ. ಆದರೆ, ನಿಜವಾಗಿಯೂ ಆಡಲು ಬಯಸಿರಲಿಲ್ಲ, ಆತ ಹೊಡೆದಾಡಲು ಇಚ್ಛಿಸಿದ್ದ ಎನ್ನಲಾಗಿದೆ. ಡಿಮಾ ತನ್ನ ದತ್ತು ಪಡೆದ ಪೋಷಕರನ್ನು ಕೊಂದ ನಿಜವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಅವನನ್ನು ತನಿಖೆ ಮಾಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...