ಯುವತಿಯಿಂದಲೇ ಗುಂಡಿ ತೋಡಿಸಿ, ಕೊನೆಗೆ ಅವಳನ್ನು ಕೊಲೆ ಮಾಡಿ ಅದೇ ಗುಂಡಿಯಲ್ಲಿ ಮುಚ್ಚಿ ಸಮಾಧಿ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಈ ಘಟನೆ ಬ್ರೆಜಿಲ್ ನ ಸಾಂಟಾ ಕ್ಯಾಟರಿನಾ ಎಂಬ ರಾಜ್ಯದಲ್ಲಿನ ಸಮುದ್ರ ತೀರದಲ್ಲಿ ನಡೆದಿದೆ. ಈ ಕುರಿತು ದಿ ಸನ್ ಯುಕೆ ವರದಿ ಮಾಡಿದ್ದು, 21 ವರ್ಷದ ಯುವತಿ ತನ್ನ ಸ್ನೇಹಿತರೊಂದಿಗೆ ಹುಟ್ಟು ಹಬ್ಬದ ಪಾರ್ಟಿಗೆ ತೆರಳಿದ್ದಳು. ಮನೆಗೆ ಬಾರದಿದ್ದಾಗ ಕುಟುಂಬಸ್ಥರು ದೂರು ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಯುವತಿಯ ಹೆಸರು ಅಮಂಡಾ ಅಬ್ಲಾಚ್.
BIG NEWS: Mi-17V5 ಹೆಲಿಕಾಪ್ಟರ್ ಪತನ; ತನಿಖೆಗೆ ಆದೇಶಿಸಿದ IAF
ಯುವತಿ ಹುಟ್ಟು ಹಬ್ಬದ ಪಾರ್ಟಿಗಾಗಿ ಸ್ನೇಹಿತರೊಂದಿಗೆ ಸಾಂಟಾ ಕ್ಯಾಟರಿನಾಗೆ ತೆರಳಿದ್ದರು. ಈ ಸಂದರ್ಭದಲ್ಲಿ ಮಾದಕ ವಸ್ತು ದಂಧೆಯಲ್ಲಿ ಕೆಲವರು ಭಾಗಿಯಾಗಿದ್ದರು ಎನ್ನಲಾಗಿದೆ. ಆಗ ಅಲ್ಬಾಚ್ ಅಲ್ಲಿದ್ದವರ ಫೋಟೋಗಳನ್ನು ತೆಗೆದಿದ್ದಾರೆ. ಹೀಗಾಗಿ ಸಿಕ್ಕಿಹಾಕಿಕೊಳ್ಳಬಹುದು ಎನ್ನುವ ಭಯದಲ್ಲಿ ಇಂತಹ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ.
ಕುಟುಂಬಸ್ಥರು ದೂರು ನೀಡಿದ ನಂತರ ಪೊಲೀಸರು, ಶಂಕಿತ ಡ್ರಗ್ ಡೀಲರ್ ನನ್ನು ಬಂಧಿಸಿದ್ದರು. ಆಗ ವಿಷಯ ಬಹಿರಂಗವಾಗಿದೆ. ಹಲವರು ಸೇರಿಕೊಂಡು ಅಲ್ಬಾಳ್ ನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಕೊಲ್ಲುವುದಕ್ಕೂ ಮುನ್ನ ಯುವತಿಯಿಂದಲೇ ಸಮಾಧಿ ತೆಗೆಯಿಸಿ, ನಂತರ ಶೂಟ್ ಮಾಡಿ, ಅದರಲ್ಲಿ ಹೂತು ಹಾಕಿದ್ದಾರೆ ಎಂದು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.